
ಬೆಂಗಳೂರು : ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿ ಒಬ್ಬ ಅಂಬೇಡ್ಕರ್,ಬಸವಣ್ಣ ,ಬುದ್ದರ,ಬಗ್ಗೆ ಕೆಲವು ಹವಹೇಳನಕಾರಿ ಮಾತುಗಳನ್ನು ಹಾಡುತ್ತಿರುವುದು ವ್ಯಾಪಕವಾಗಿ ಹಾರಾಡುತ್ತಿದೆ.ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಸಾಮಾಜಿಕ ಜಾಲತಾಣಗಳು ಎಂದರೇ ತಮ್ಮ ಪ್ರತಿಬೆಗಳನ್ನು ತೋರಿಸುವ ಒಂದು ವೇದಿಕೆ ಆಗಿದೆ. ಆದರೆ ಈ ತರದ ವಿಷಯಕ್ಕೆ ಇಂದು ಹವಹೇಳನಕಾರಿ ಹೇಳಿಕೆಗಳಿಗೆ ಪ್ರಸಿದ್ದಿ ಆಗುತ್ತಿರುವುದು ಗಮನಿಸಬೇಕಾದ ಅಂಶವೇ ಆಗಿದೆ,ಆದರೆ ಅಭಿವ್ಯಕ್ತಿ ಸ್ವಾತಂತ್ರ ಎಂದರೆ ಮತ್ತೊಬ್ಬರ ನಂಬಿಕೆ ,ಗೌರವ ಮತ್ತು ಭಾವನೆಗಳನ್ನೂ ಉದ್ದೇಶ ಪೂರ್ವವಾಗಿ ಅವಮಾನಿಸುವ ಸ್ವಾತಂತ್ರ ಅಲ್ಲ .
ಅಂಬೇಡ್ಕರ್ :ಸಮಾನತೆಯ ಹೋರಾಟದ ಪ್ರತೀಕ
ಡಾಕ್ಟರ್ ಬಿ .ಆರ್ .ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ (ಶಿಲ್ಪಿ) ಪಿತಾಮಹ.ಸಾಮಾಜಿಕ ಅಸಮಾನತೆ ,ಜಾತಿ ,ತಾರತಮ್ಯ ,ಮತ್ತು ಅನ್ಯಾಯದ ವಿರುದ್ದ ಅವರು ತಮ್ಮ ಜೀವನವನ್ನೇ ಹೋರಾಟಕ್ಕೆ ಸಮರ್ಪಿಸಿದವರು.ಶಿಕ್ಷಣ,ಸಮಾನತೆ,ಸ್ವಾತಂತ್ರ,ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಅವರು ನೀಡಿದ ಸಂದೇಶ ಇಂದಿಗೂ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ.ಅಂತಹ ವ್ಯಕ್ತಿಯ ಕುರಿತು ಬಿನ್ನಬಿಪ್ರಾಯವಿದ್ದರೆ ಅದನ್ನು ತಥ್ಯ ಮತ್ತು ತರ್ಕದ ಆದರದ ಮೇಲೆ ಚರ್ಚಿಸಬಹುದು .ಆದರೆ ಅವಹೇಳನ ಅಥವಾ ನಿಂದನೆ ಸರಿಯಲ್ಲ .ಎಂದು ವಿದ್ವಾಂಸರ ಅಬಿಪ್ರಾಯ.
ನಾವು ಯಾವ ವ್ಯಕ್ತಿಯ ಬಗ್ಗೆ ಮಾತನಾಡುತ್ತೆವೊ ಆ ಮಹಾನ್ ವ್ಯಕ್ತಿಯನ್ನು ಗೌರವಿಸುತ್ತೇವೋ ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ,ನಮ್ಮ ಮಾತುಗಳಲ್ಲೂ ಸಂಯಮ ಮತ್ತು ಮಾನವೀಯತೆಯನ್ನು ಕಾಪಾಡಿಕೊಳ್ಳಬೇಕು ,
ಅಂಬೇಡ್ಕರ ,ಬಸವಣ್ಣ ,ಮತ್ತು ಬುದ್ದರ ವಿಚಾರಗಳನ್ನು ಗೌರವಿಸವ ಎಲ್ಲರೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತವಾಗಿ ಪ್ರತಿಕ್ರಿಯಿಸೋಣ .ಅವಮಾನಕ್ಕೆ ಅವಮಾನದಿಂದ ಉತ್ತರ ನೀಡದೆ ಸುಳ್ಳಿಗೆ ಸತ್ಯದಿಂದ ಉತ್ತರ ನೀಡೋಣ ,ದ್ವೇಷಕ್ಕೆ ದ್ವೇಷದಿಂದಲ್ಲ,ತರ್ಕ ಮತ್ತು ಮಾನವೀಯತೆಯಿಂದ ಉತ್ತರ ನೀಡೋಣ.
ಸಾಮಾಜಿಕ ಜಾಲತಾಣ ನಮ್ಮ ಕೈಯಲ್ಲಿರುವ ಶಕ್ತಿಶಾಲಿ ಮಾದ್ಯಮ.ಅದನ್ನು ಸಮಾಜವನ್ನು ಒಡೆಯುವ ಅಸ್ತ್ರ ಅಲ್ಲ,ಸಮಾನತೆ,ಸಹೋದರತ್ವ ಮತ್ತು ಮಾನವೀಯತೆಯನ್ನು ಬೆಳೆಸಲು ಬಳಸೋಣ.
