Wednesday, January 23 , 2019 10:41 AM

ಶೂಟಿಂಗ್ ಮುಗಿದ ಮೇಲೆ ನಟ, ನಟಿಯರು ಡ್ರೆಸ್ ಗಳನ್ನ ಏನ್ ಮಾಡುತ್ತಾರೆ ಗೊತ್ತಾ..?


Tuesday, February 20th, 2018

ಸ್ಪೆಷಲ್ ಡೆಸ್ಕ್: ಸಿನೆಮಾ ಎನ್ನುವುದು ಉದ್ಯಮ. ಸಾಮಾನ್ಯವಾಗಿ ಒಂದು ಸಿನೆಮಾ, ಸೀರಿಯಲ್ ಶೂಟಿಂಗ್ ನಲ್ಲಿ ನಟ , ನಟಿಯರು ಬಳಸುವ ವಸ್ತ್ರಗಳು ಸ್ವಂತದ್ದಾಗಿರುವುದಿಲ್ಲ. ಬಾಡಿಗೆಗೆ ಕೊಂಡಿರುತ್ತಾರೆ. ಹೀರೋ, ಹೀರೋಯಿನ್ ಹಾಕಿಕೊಳ್ಳುವ ಬಟ್ಟೆಯನ್ನ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಏನು ಮಾಡುತ್ತಾರೆ ಎನ್ನುವುದೇ ಹಲವರ ಪ್ರಶ್ನೆ. ಇದಕ್ಕೆ ಇಲ್ಲಿದೆ ಸೂಕ್ತ ಉತ್ತರ.

ಒಂದು ಸಿನಿಮಾದಲ್ಲಿ ನಟ ನಟಿಯರ ಬಟ್ಟೆಗಳಿಗೆ ಸುಮಾರು 10 -15 ಲಕ್ಷದಷ್ಟು ಖರ್ಚಾಗುತ್ತದೆ. ಇವರು ಧರಿಸುವ ಬಟ್ಟೆಗಳೆಲ್ಲ ಬ್ರಾಂಡೆಡ್ ಆಗಿರುತ್ತದೆ. ಸ್ಟಾರ್ ಹೀರೋಗಳು ಅಥವಾ ಹೀರೋಯಿನ್ ಆದರೆ ಒಬ್ಬರ ಬಟ್ಟೆಗೆ ಸುಮಾರು 10 ಲಕ್ಷದವರೆಗೆ ಖರ್ಚಾಗುತ್ತದೆ. ಹಾಗಾದರೆ ಇಷ್ಟು ದುಬಾರಿ ಬಟ್ಟೆಗಳನ್ನ ಶೂಟಿಂಗ್ ಮುಗಿದ ನಂತರ ಏನು ಮಾಡುತ್ತಾರೆ ಅನ್ನುವುದೇ ಕುತೂಹಲ.

ಕೆಲವು ನಿರ್ಮಾಪಕರು ಬಟ್ಟೆಗಳನ್ನ ಗೋಡನ್ ನಲ್ಲಿ ಇಡುತ್ತಾರೆ. ಕೆಲವರಂತೂ ಸೆಕೆಂಡ್ಸ್ ನಲ್ಲಿ ಮಾರಿ ಬಿಡುತ್ತಾರೆ. ಕೆಲವೊಮ್ಮೆ 10 ಲಕ್ಷದ ಬಟ್ಟೆ ಸೆಕೆಂಡ್ಸ್ ನಲ್ಲಿ 1 ಲಕ್ಷಕ್ಕೆ ಮಾರಾಟವಾಗುತ್ತದೆ. ಕೆಲವರು ಬಟ್ಟೆಯನ್ನ ಖರೀದಿ ಮಾಡಿ ಆರ್ಟಿಸ್ಟ್ ಗೆ ಬಾಡಿಗೆಗೆ ಕೊಡುತ್ತಾರೆ. ಸಿನಿಮಾ ಸೆಕೆಂಡ್ಸ್ ಬಟ್ಟೆಯನ್ನ ಮಾರುವುದಕ್ಕಾಗಿಯೇ ಮುಂಬೈ ನಲ್ಲಿ ಒಂದು ಮಾರ್ಕೆಟ್ ಇದೆ. ಕೆಲವು ನಿರ್ಮಾಪಕರು ಅಲ್ಲಿಗೆ ಹೋಗಿ ಮಾರುತ್ತಾರೆ.

ಮತ್ತೆ ಮತ್ತೆ ಸಿನಿಮಾ ತೆಗೆಯುವ ನಿರ್ಮಾಪಕರು ಮಾತ್ರ ಗೋಡನ್ ನಲ್ಲಿ ಇಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಗೆ ಈ ಬಟ್ಟೆ ಬಳಸುತ್ತಾರೆ. ಕೆಲವೊಮ್ಮೆ ಸಿನಿಮಾ ಶೂಟಿಂಗ್ ವೇಳೆ ನಟ ನಟಿಯರಿಗೆ ಇಷ್ಟವಾದ ಬಟ್ಟೆ ಮತ್ತು ಶೂ ಗಳನ್ನ ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಎಲ್ಲಾ ಸ್ಟಾರ್ ಮಾಡುವುದಿಲ್ಲ. ಇದು ಸಿನಿಮಾ ಬಟ್ಟೆಗಳ ವಿಚಾರ ಆದರೆ ಇನ್ನು ಸೀರಿಯಲ್ ಬಟ್ಟೆಗಳು, ಸೀರಿಯಲ್ ಗಳಲ್ಲಿ ಅವರಿಗೆ ಅವರೇ ಬಟ್ಟೆಗಳನ್ನ ತೆಗೆದುಕೊಂಡು ಬರಬೇಕು. ನಿರ್ಮಾಪಕರು ಖರೀದಿಸಿ ಕೊಡುವುದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.