Saturday, August 18 , 2018 5:16 AM

ತುಳಸಿ ಗಿಡದ ಈ ಬದಲಾವಣೆ ನಿಮ್ಮ ಮನೆಯಲ್ಲೂ ಬದಲಾವಣೆ ತರುತ್ತದೆ..!


Monday, March 5th, 2018

ಸ್ಪೆಷಲ್ ಡೆಸ್ಕ್: ನಿಮ್ಮ ಮನೆಯ ಆವರಣದಲ್ಲಿ ತುಳಸಿ ಗಿಡ ಇರಬಹುದು. ಈ ಗಿಡದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ..? ಈ ಗಿಡದಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದು. ಇದರಿಂದ ಎಲ್ಲಾ ಒಳ್ಳೆಯದಾಗುತ್ತದೆ. ಆದರೆ ಕೆಲ ಕಾರಣಗಳಿಂದ ತುಳಸಿ ಗಿಡದ ಅಸಲಿ ಬಣ್ಣ ಬದಲಾದರೇ, ಆಕಸ್ಮಿಕವಾಗಿ ಎಲೆಗಳು ಒಣಗಿದರೇ ಹಾಗೂ ಉದುರಿದರೆ ಅನೇಕ ರೀತಿಯಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದ ನೀವು ಭವಿಷ್ಯದಲ್ಲಾಗುವ ಘಟನೆಗಳ ಕುರಿತು ತಿಳಿಯಬಹುದು..!

ಯಾವ ಸೂಚನೆ..?
* ತುಳಸಿ ಗಿಡದ ಎಲೆಗಳ ಬಣ್ಣ ದಿಡೀರ್ ಆಗಿ ಬದಲಾದರೆ ಆ ಮನೆಯಲ್ಲಿದ್ದವರ ಮೇಲೆ ಕ್ಷುದ್ರಶಕ್ತಿ ಪ್ರಯೋಗಿಸಲಿದೆ ಎಂದರ್ಥ.
* ನಿತ್ಯ ನೀರು ಹಾಕಿ ಬೆಳೆಸುತ್ತಿರುವ ತುಳಸಿ ಗಿಡದ ಎಲೆಗಳು ಸಡನ್ ಆಗಿ ಒಣಗಿದರೆ ಆ ಮನೆಯ ಯಜಮಾನ ಕೆಲವೇ ದಿನಗಳಲ್ಲಿ ಭಯಂಕರ ರೋಗಕ್ಕೆ ತುತ್ತಾಗಲಿದ್ದಾನೆ ಎಂದರ್ಥ.
* ಮನೆಯಲ್ಲಿನ ತುಳಸಿ ಗಿಡಕ್ಕೆ ನೀರು ಹಾಕಿಲ್ಲವೆಂದರೂ ಸೊಂಪಾಗಿ ಬೆಳೆಯುತ್ತದೆ ಎಂದರೆ ಆ ಮನೆಯಲ್ಲಿರುವವರಿಗೆ ಅದೃಷ್ಟ ಖುಲಾಯಿಸಲಿದೆ. ಭವಿಷ್ಯದಲ್ಲಿ ಅವರು ಸಂಪತ್ತು ಗಳಿಸಲಿದ್ದಾರಂತೆ.
* ತುಳಸಿಗಿಡ ನೆಟ್ಟ ಕುಂಡಿಯಲ್ಲಿ ಮತ್ತೊಂದು ತುಳಸಿಗಿಡ ಬೆಳೆದರೆ, ಮನೆಯಲ್ಲಿರುವವರು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ಅಂದುಕೊಂಡ ಎಲ್ಲಾ ಕಾರ್ಯಗಳು ಅಡ್ಡಿ ಆತಂಕಗಳಿಲ್ಲದೆ ನಡೆಯುತ್ತದೆ.
* ತುಳಸಿ ಗಿಡ ಕಾರಣಾಂತರಗಳಿಂದ ಒಣಗಿದರೆ ತಕ್ಷಣ ನೀರು ಹಾಕಿ ಸೊಂಪಾಗಿ ಬೆಳೆಯುವಂತೆ ಆರೈಕೆ ಮಾಡಬೇಕು. ಇಲ್ಲವಾದರೆ ಒಳ್ಳೆಯದಾಗಲ್ವಂತೆ. ತುಳಸಿಗಿಡ ಹಸಿರಾಗಿ ಸೊಂಪಾಗಿ ಬೆಳೆದಿರುವ ಮನೆಯಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.