Wednesday, January 23 , 2019 10:55 AM

ಸೂರ್ಯ ಮುಳುಗಿದ ನಂತ್ರ ಈ ಕೆಲಸ ಮಾಡಬೇಡಿ!


Thursday, February 22nd, 2018

sun set
ಸ್ಪೆಷಲ್ ಡೆಸ್ಕ್: ದಿನನಿತ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಪದ್ಧತಿ, ನಿಯಮಗಳು ಇರುತ್ತದೆ. ಅದರಂತೆ ನಡೆದುಕೊಂಡಲ್ಲಿ ಸುಖ-ಸಮೃದ್ಧಿ ಜೊತೆಗೆ ಬಡತನ ದೂರವಾಗಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.  ಬೆಳಗಿನ ಸಮಯದಲ್ಲಿ ಕೆಲಸದ ಒತ್ತಡದಲ್ಲಿರುವ ಅನೇಕರು ರಾತ್ರಿ ಉಗುರು ಕತ್ತರಿಸುತ್ತಾರೆ. ಇದು ಅಪಶಕುನ ಎಂದು ಪರಿಗಣಿಸಲಾಗಿದೆ. ರಾತ್ರಿ ಉಗುರು ಕತ್ತರಿಸಿದರೆ ಲಕ್ಷ್ಮಿ ಮುನಿಸಿಕೊಂಡು ಮನೆ ಬಿಟ್ಟು ಹೋಗುತ್ತಾಳೆಂಬ ನಂಬಿಕೆ ಇದೆ. ಗುರುವಾರ ದೇವಾನುದೇವತೆಗಳ ಗುರುವಿನ ದಿನವಾಗಿದೆ. ಅಂದು ಕ್ಷೌರ ಮಾಡಿಸಬಾರದು.

ಗುರುವಾರ ಕ್ಷೌರ ಮಾಡಿದರೆ ಭಾಗ್ಯ ಲಭಿಸುವುದಿಲ್ಲ. ಕ್ಷೌರ ಮಾಡಲು ರವಿವಾರ, ಸೋಮವಾರ, ಬುಧವಾರ, ಶುಕ್ರವಾರ ಒಳ್ಳೆಯದು. ಮಂಗಳವಾರ, ಗುರುವಾರ ಹಾಗೂ ಶನಿವಾರ ಮರೆತು ಈ ಕೆಲಸವನ್ನು ಮಾಡಬಾರದು.

ಸೂರ್ಯ ಮುಳುಗಿದ ನಂತ್ರ ತುಳಸಿಯನ್ನು ಸ್ಪರ್ಶಿಸಬಾರದು. ಮಧ್ಯಾಹ್ನ 1 ಗಂಟೆ ನಂತರ ತುಳಸಿಯನ್ನು ಕೀಳಬಾರದು. ಹಾಗೆಯೇ ಸೂರ್ಯಾಸ್ತವಾಗುತ್ತಿದ್ದಂತೆ ತುಳಸಿ ಗಿಡವನ್ನು ಮುಟ್ಟಬಾರದು.  ಸಂಜೆ ಹೊತ್ತಿನಲ್ಲಿ ನಿದ್ರೆ ಮಾಡಬಾರದು.ಯಾರು ನಿಯಮಿತವಾಗಿ ಸಂಜೆ ಸಮಯದಲ್ಲಿ ನಿದ್ರೆ ಮಾಡುತ್ತಾರೋ ಅವರು ಸ್ಥೂಲಕಾಯತೆಯಿಂದ ಬಳಲುತ್ತಾರೆ. ಆರೋಗ್ಯವಂತ ವ್ಯಕ್ತಿಗಳು ಸಂಜೆ ನಿದ್ರೆ ಮಾಡಬಾರದು. ಸೋಮಾರಿತನ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುವುದಿಲ್ಲ.

ಸಂಜೆ ವೇಳೆಯಲ್ಲಿ ಎಂದೂ ಸ್ತ್ರೀಗೆ ಅವಮಾನ ಮಾಡಬಾರದು. ಮನೆಯೊಳಗೇ ಅಥವಾ ಮನೆ ಹೊರಗಿರಲಿ ಸಂಜೆ ಸಮಯದಲ್ಲಿ ಮಹಿಳೆ ಜೊತೆ ಶಾಂತವಾಗಿ ವರ್ತಿಸಬೇಕು. ಸ್ತ್ರೀಗೆ ಅವಮಾನ ಮಾಡುವುದು ಪಾಪವೆಂದು ಪರಿಗಣಿಸಲಾಗಿದೆ. ಸಂಜೆ ವೇಳೆ ಮದ್ಯ,ಡ್ರಗ್ಸ್ ಸೇವನೆ ಮಾಡಬಾರದು. ಮದ್ಯ ಸೇವನೆ ಒಳ್ಳೆಯದಲ್ಲ. ಅದರಲ್ಲೂ ಸಂಜೆ ಮದ್ಯಪಾನ ಮಾಡಿದರೆ ದೇಹ ದುರ್ಬಲವಾಗುತ್ತದೆ. ನಶೆಯ ಕಾರಣ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲವೂ ತಪ್ಪಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.