Saturday, August 18 , 2018 5:17 AM

ನಟಿ ಶ್ರೀದೇವಿ ಸಾವನ್ನಪ್ಪಿದ ರೂಮ್‌ ನಲ್ಲಿ ಆತ್ಮ ಇದ್ಯಾ..?


Tuesday, March 13th, 2018

sridevi death

ಸ್ಪೆಷಲ್ ಡೆಸ್ಕ್: ಹಿರಿಯ ನಟಿ ಶ್ರೀದೇವಿ ಮದುವೆಯ ನಿಮಿತ್ತ ದುಬೈಗೆ ಹೋಗಿದ್ದರು. ಈ ವೇಳೆ ಇವರು ದುಬೈನ ಫೈ ಸ್ಟಾರ್ ಹೋಟೆಲ್ ಜುಮೇರಾ ಎಮಿರೇಟ್ಸ್ ಟವರ್ಸ್ ನ 2201 ರೂಮ್ ನಲ್ಲಿ ತಂಗಿದ್ದರು. ಆದರೆ ವಿಧಿವಶಾತ್ ಬಾತ್ ರೂಮ್ ಟಬ್ ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಇದೀಗ ಶ್ರೀದೇವಿ ಸಾವನ್ನಪ್ಪಿದ ರೂಮ್ ನಿಂದ ಕಿರುಚಾಟ ಹಾಗೂ ಅಳುವ ಶಬ್ದಗಳು ಕೇಳಿ ಬರುತ್ತಿದೆಯಂತೆ. ಶ್ರೀದೇವಿ ಆತ್ಮ ಅಲ್ಲೇ ಇದೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ಮಾತುಗಳು.

ಅಂತಹ ಯಾವುದೇ ಶಬ್ದಗಳು ಆ ರೂಮ್ ನಿಂದ ಕೇಳಿ ಬರುತ್ತಿಲ್ಲ. ಇದು ಭ್ರಮೆ ಅಷ್ಟೇ. ಶ್ರೀದೇವಿ ಸಾವನ್ನಪ್ಪಿದ ರೂಮ್ ನ್ನ ಹೋಟೆಲ್ ನವರು ಏನು ಮಾಡಿದ್ದಾರೆ ಏನು ಗೊತ್ತೇ..? ನಟಿ ಶ್ರೀದೇವಿ ಸಾವನ್ನಪ್ಪಿದ ರೂಮ್ ನಂಬರ್ 2201 ನ್ನು ತೆಗೆದುಕೊಳ್ಳಲು ಯಾರು ಕೂಡಾ ಆಸಕ್ತಿ ತೋರಿಸುತ್ತಿಲ್ಲವಂತೆ. ಯಾಕೆಂದರೆ ಆ ರೂಮ್ ನಂಬರ್ ಅಂತಾರಾಷ್ಟ್ರೀಯ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಹೀಗಾಗಿ ಯಾರು ಕೂಡ ಆ ರೂಮ್ ನ್ನ ಬಾಡಿಗೆ ಪಡೆಯಲು ಮುಂದೆ ಬರುತ್ತಿಲ್ಲ. ಈ ಕಾರಣದಿಂದಾಗಿ ಈ ರೂಮ್ ಅನ್ನ ಯಾರಿಗೂ ಕೊಡದೆ ತಾತ್ಕಾಲಿಕವಾಗಿ ಮುಚ್ಚಿದ್ದಾರಂತೆ ಹೋಟೆಲ್ ನವರು.

ಆ ರೂಮ್ ನಲ್ಲಿರುವ ವಸ್ತುಗಳನ್ನ ತೆಗೆದು ಹಾಕಲಾಗಿದೆ. ಅಲ್ಲಿ ಹೊಸದನ್ನ ಫಿಕ್ಸ್ ಮಾಡಿ ಹಾಗೆ ನವೀಕರಿಸಿ ಮತ್ತೆ ರೂಮ್ ರೆಂಟ್ ಕೊಡಲು ಹೋಟೆಲ್ ನವರು ನಿರ್ಧಾರ ಮಾಡಿದ್ದಾರೆ. ಈ ರೂಮ್ ನ ಒಂದು ದಿನದ ರೆಂಟ್ 35 ಸಾವಿರವಂತೆ..!

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.