Wednesday, May 23 , 2018 10:02 PM

ಗುಡ್ ನ್ಯೂಸ್: ಇನ್ಮುಂದೆ ಕನ್ನಡದಲ್ಲೂ ಸಿಗುತ್ತೆ ರೈಲ್ವೇ ಟಿಕೆಟ್


Thursday, March 1st, 2018


ಬೆಂಗಳೂರು: ನಾಡಿ ಗಡಿ, ಭಾಷೆ, ಸೇರಿದಂತೆ ಇನ್ನಿತ್ತರ ವಿಷಯಗಳು ಬಂದ ವೇಳೆಯಲ್ಲಿ ಕೇಂದ್ರ ಸರ್ಕಾರಗಳು ನಮ್ಮನ್ನು ಮಲತಾಯಿ ನೋಡಿದ ಹಾಗೇ ನೋಡುವುದು ಹೆಚ್ಚು, ಅದೂ ನಿಜವೂ ಕೂಡ ಹೌದು. ಇವೆಲ್ಲದರ ನಡುವೆ ಕನ್ನಡಿಗರ ಬಹು ದಿವಸದ ಬೇಡಿಕೆಯಾಗಿದ್ದ ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಅಕ್ಷರ ಮುದ್ರಣಕ್ಕೆ  ಜಯ ಸಿಕ್ಕದೆ. ಹೌದು ಇನ್ಮುಂದೆ ಮುಂದೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ರೈಲು ಪ್ರಯಾಣಿಕರಿಗೆ ಸಿಗಲಿದೆ.

ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿ ಮುದ್ರಣಗೊಂಡಿರುವ ಟಿಕೆಟ್ ಫೋಟೋ ಪ್ರಕಟಿಸಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಇಂಗ್ಲಿಷ್, ಹಿಂದಿ ಅಲ್ಲದೇ ದಕ್ಷಿಣ ಭಾರತದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ ಅಂತ ತಿಳಿದು ಬಂಧಿದೆ.

ಅಂದ ಹಾಗೇ  ಕರ್ನಾಟಕದ ಎಲ್ಲ ಕೌಂಟರ್ ಗಳಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ. ಆದರೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಕನ್ನಡದಲ್ಲಿ ಮುದ್ರಣಗೊಳ್ಳುವ ಟಿಕೆಟ್ ಸಿಗುವುದಿಲ್ಲ ಎಂದು ತಿಳಿದು ಬಂದಿದೆ, ಇದಲ್ಲದೇ  ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ.

ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ಖುಷಿಯ ವಿಚಾರ ಎಂದು ಹಿಂದಿ ಹೇರಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದ ಕನ್ನಡರಿಗರು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಂತಸವನ್ನು ಹಂಚಿಕೊಳ್ಳುತ್ತಿದ್ದು. ಕನ್ನಡರಿಗರ ಬಹು ದಿವಸದ ಹೋರಾಟಕ್ಕೆ ಸಿಕ್ಕಗೆಲುವನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ/

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.