Wednesday, May 23 , 2018 9:58 PM

ಶನಿ ದೇವರ ಆಲಯಕ್ಕೆ ಹೋಗಿ ಎಳ್ಳುದೀಪ ಉರಿಸಬೇಕು ಯಾಕ್ ಗೊತ್ತಾ?


Wednesday, February 21st, 2018

Significance of Lord Shani deva

ಸ್ಪೆಷಲ್ ಡೆಸ್ಕ್: ವಿವಿಧ ಜಾತಕದಲ್ಲಿ ಶನಿ ಪ್ರಭಾವ ಇರುವವರು ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹೀಗಂತ ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ಶನಿ ಪ್ರಭಾವದಿಂದ ಕೆಲವರಿಗೆ ಒಳ್ಳೆಯದಾದರೆ, ಕೆಲವರಿಗೆ ಕೆಟ್ಟದಾಗುತ್ತದಂತೆ. ಶನೀಶ್ವರ ಪ್ರತಿಯೊಂದು ರಾಶಿಯಲ್ಲೂ ಎರಡೂವರೆ ವರ್ಷಗಳಕಾಲ ಪಾಲಿಸುತ್ತಾನಂತೆ.

ಬುಧ, ರಾಹು,ಕೇತು ಗ್ರಹಗಳು ಮಿತ್ರರೆಂದು…ಸೂರ್ಯ, ಚಂದ್ರಗ್ರಹಗಳು ಶತ್ರುಗಳೆಂದು ಹೇಳುತ್ತಾರೆ. ಶನಿದೆಶೆ 19 ಸಂವತ್ಸರಗಳ ಕಾಲ ಇರುತ್ತದೆ. ಶನಿಯ ವಾಹನ ಕಾಗೆ ಹಾಗೂ ಆತನಿಗೆ ಇಷ್ಟವಾದ ಲೋಹ ಕಬ್ಬಿಣವೆಂದು ಹೇಳುತ್ತಾರೆ. ಬಣ್ಣಗಳಲ್ಲಿ ನೀಲಿ ಬಣ್ಣ ಹಾಗೂ ಕರಿ ಎಳ್ಳು ಇಷ್ಟವಂತೆ. ಶನಿಸ್ತ್ರೋತಗಳನ್ನು ಸ್ತುತಿಸಿದವರನ್ನು ಶನಿ ಪೀಡಿಸುವುದಲ್ಲವಂತೆ.

ಶನಿವಾರ, ಶನಿ ದೇವರ ಆಲಯಕ್ಕೆ ಹೋಗಿ ಎಳ್ಳುದೀಪ ಉರಿಸಬೇಕು. ಅದೇ ರೀತಿ ಎಳ್ಳಿನಿಂದ ತಯಾರಿಸಿದ ಅನ್ನವನ್ನು ನೈವೇಧ್ಯವನ್ನಾಗಿಡಬೇಕು. ಬ್ರಾಹ್ಮಣರಿಗೆ ಅಥವಾ ಬಡವರಿಗೆ ಕಪ್ಪು ಬಣ್ಣದ ವಸ್ತ್ರಗಳನ್ನು ದಾನವಾಗಿ ನೀಡಬೇಕು. ಒಂದು ವೇಳೆ ನಿಮಗೆ ಶನಿ ಹಿಡಿದಿದ್ದಾನೆ ಅಂತಾ ಎನಿಸಿದರೆ ಪ್ರತಿ ದಿನ ಒಂದು ಮುದ್ದೆ ಅನ್ನವನ್ನು ಕಾಗೆಗೆ ಇಡಬೇಕು. ಹೀಗೆ ಮಾಡಿದಲ್ಲಿ ಶನಿಯ ಕರುಣೆ ನಿಮ್ಮ ಮೇಲಿರುತ್ತದೆ. ಹೀಗೆ ಪ್ರತಿದಿನ ಕಾಗೆಗೆ ಅನ್ನ
ಇಡುವುದರಿಂದ ನಿಮ್ಮ ಕೆಲಸಗಳೆಲ್ಲವೂ ನಿರ್ವಿಘ್ನವಾಗಿ ಆಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.