Wednesday, May 23 , 2018 10:03 PM

ಶಿವರಾತ್ರಿ ದಿನ ಹೀಗೆ ಮಾಡಿ ಕೋಟಿ ಜನ್ಮದ ಪುಣ್ಯ ಸಿಗುತ್ತದೆ..!


Tuesday, February 13th, 2018

ಸ್ಪೆಷಲ್ ಡೆಸ್ಕ್: ಹಿಂದೂ ಧರ್ಮೀಯರಿಗೆ ಶಿವರಾತ್ರಿ ಎಂದರೆ ಬಹಳ ಪ್ರಮುಖವಾದ ಹಬ್ಬ. ಜನುಮಕ್ಕೊಂದು ಶಿವರಾತ್ರಿ ಎಂದು ಹಿರಿಯರು ಹೇಳುತ್ತಾರೆ. ಯಾಕೆಂದರೆ ಶಿವರಾತ್ರಿಯು ಅಷ್ಟೊಂದು ಮಹತ್ವದ್ದು. ಶಿವರಾತ್ರಿ ದಿನದಂದು ಶಿವನನ್ನು ಪೂಜಿಸಿದರೆ ಜನ್ಮ ಜನ್ಮಗಳ ಮೋಕ್ಷ ಪಡೆಯುವ ಅದೃಷ್ಟ ಸಿಗುತ್ತದೆ. ಶಿವನ ದೇವಾಲಯಗಳಲ್ಲಿ ಮಾಡುವ ಪ್ರದಕ್ಷಿಣೆಗೂ ಉಳಿದ ಆಲಯಗಳಲ್ಲಿ ಮಾಡುವ ಪ್ರದಕ್ಷಿಣೆಗೂ ವ್ಯತ್ಯಾಸ ಇರುತ್ತದೆ.

ಶಿವನ ದೇವಾಲಯದಲ್ಲಿ ಧ್ವಜ ಸ್ತಂಭದಿಂದ ನಮ್ಮ ಎಡಭಾಗದ ಕಡೆಗೆ ಹೋಗಿ ಗರ್ಭಗುಡಿಯ ಹಿಂದೆ ಇರುವ ಸೋಮಸೂತ್ರದವರೆಗೂ ಹೋಗಿ ಹಿಂತಿರುಗಬೇಕು. ಆದರೆ ಸೋಮಸೂತ್ರವನ್ನು ದಾಟಿ ಹೋಗಬಾರದು. ಅಲ್ಲಿಂದ ಹಿಂತಿರುಗಿ ಅಪ್ರದಕ್ಷಿಣವಾಗಿ ಸೋಮಸೂತ್ರವನ್ನು ಸುತ್ತಿಕೊಂಡು ಪುನಃ ಸೋಮಸೂತ್ರದವರೆಗೂ ಬಂದರೆ ಒಂದು ಪ್ರದಕ್ಷಿಣೆ ಮುಕ್ತಾಯವಾದಂತೆ. ಹೀಗೆ ಬೆಸ ಸಂಖ್ಯೆಯಲ್ಲಿ ಬರುವ 3, 5, 7, 9 ಪ್ರದಕ್ಷಿಣೆಗಳನ್ನು ಮಾಡಬಹುದು. ಶಿವಪ್ರದಕ್ಷಿಣೆಯಲ್ಲಿ ಸೋಮಸೂತ್ರವನ್ನು ದಾಟಬಾರದೆಂಬುದು ನಿಯಮ. ಆ ರೀತಿ ಎಷ್ಟೇ ಪ್ರದಕ್ಷಿಣೆಗಳನ್ನು ಮಾಡಿದರೂ ಒಂದು ಪ್ರದಕ್ಷಿಣೆ ಕಡಿಮೆಯಾಗುತ್ತದೆಂಬುದು ಶಾಸ್ತ್ರ.

ದಿನವಿಡೀ ಶಿವನಾಮಸ್ಮರಣೆಯಲ್ಲಿ ಮಗ್ನರಾಗುವ ಪವಿತ್ರವಾದ ದಿನ ಮಹಾಶಿವರಾತ್ರಿ. ಈ ಹಬ್ಬವನ್ನು ಆಚರಿಸುವಾಗ ಶಿವಾರ್ಚನೆ, ಉಪವಾಸ, ಜಾಗರಣೆ ಈ 3 ಮುಖ್ಯವಾದ, ವಿಶೇಷವಾದ ನಿಯಮಗಳನ್ನು ಪಾಲಿಸಬೇಕು. ಉಪವಾಸ ಎಂದರೆ ಶಿವನ ರೂಪವನ್ನು ನೆನೆಯುತ್ತಾ, ಶಿವ ನಾಮಸ್ಮರಣೆ ಮಾಡುವುದು. ಶಿವರಾತ್ರಿಯ ದಿನದ ಸೂರ್ಯಾಸ್ತಮಯದಿಂದ ಮಾರನೇ ದಿನ ಸೂರ್ಯೋದಯದವರೆಗೂ ನಿದ್ದೆ ಮಾಡದೆ ಎಚ್ಚರಿಕೆಯಿಂದ ಇರುವುದನ್ನು ಜಾಗರಣೆ ಎನ್ನುತ್ತಾರೆ. ಈ ಮೂರು ನಿಯಮಗಳನ್ನು ಅನುಸರಿಸಿದರೆ ಶಿವನ ಅನುಗ್ರಹ ಪಡೆಯಬಹುದು ಎಂಬುದು ಭಕ್ತರ ನಂಬಿಕೆ.

ಶಿವರಾತ್ರಿಯಂದು ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಸಮರ್ಪಿಸುವುದು ಒಳ್ಳೆಯದು. ಹಾಗೂ ಉಪವಾಸವಿರುವುದು ಆಚಾರವಾಗಿ ಬರುತ್ತಿದೆ. ಶಿವರಾತ್ರಿಯಂದು ಉಪವಾಸ ಮಾಡಿದವರು ಪುನರ್ಜನ್ಮ ಇಲ್ಲದಂತೆ ಮೋಕ್ಷ ಪಡೆಯುವರೆಂದು ಶಿವಭಕ್ತರ ನಂಬಿಕೆ. ಶಿವರಾತ್ರಿಯಂದು ಪವಿತ್ರವಾದ ಶಿವ ಮಂತ್ರ “ಓಂ ನಮಃ ಶಿವಾಯ” ಎಂದು ಆ ದಿನವೆಲ್ಲಾ ಸ್ಮರಣೆ ಮಾಡುತ್ತಲೇ ಇರಬೇಕು.ಶಿವರಾತ್ರಿಯಂದು ಉಪವಾಸ ಇರುವುದರಿಂದ ಆ ಶಿವನ ಅನುಗ್ರಹ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.

ಉಪವಾಸದ ಸಮಯದಲ್ಲಿ ಹಾಲು, ಹಣ್ಣುಗಳನ್ನು ಸೇವಿಸಬಹುದು. ಉಪವಾಸವನ್ನಾಚರಿಸಿದ ಭಕ್ತರು ಶಿವನನ್ನು ದರ್ಶನ ಮಾಡಿಕೊಂಡು ಶಿವನಿಗೆ ಪ್ರೀತಿಯಾದ ಹಾಲು, ಜೇನು, ಸಕ್ಕರೆ, ತುಪ್ಪದಿಂದ ಅಭಿಷೇಕವನ್ನು ಮಾಡುವರು.ನಂತರ ಶಿವನಿಗೆ ತಿಲಕವನ್ನಿಟ್ಟು ಹೂಗಳಿಂದ ಅಲಂಕರಿಸಿ, ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಇದುವೇ ವಿಶೇಷ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.