Saturday, August 18 , 2018 5:16 AM

ಶಿವ ದೇಗುಲದಲ್ಲಿ ಪ್ರದಕ್ಷಿಣೆ ಹೇಗೆ ಹಾಕಬೇಕು ಗೊತ್ತೇ.?


Wednesday, February 21st, 2018

shiva temple

ಸ್ಪೆಷಲ್ ಡೆಸ್ಕ್: ದೇವಾಲಯಗಳು ಪ್ರಶಾಂತತೆಯ ಚಿಹ್ನೆಗಳು. ಅಲ್ಲಿಗೆ ಹೋದರೆ ಮನಸ್ಸಿಗೆ ನೆಮ್ಮದಿ ಸಿಗುವುದಷ್ಟೇ ಅಲ್ಲ, ಆ ಪರಿಸರಗಳಲ್ಲಿ ಇರುವ ಪಾಸಿಟಿವ್ ಎನರ್ಜಿ ನಮಗೆ ಸಿಗುತ್ತದೆ. ಇದರಿಂದ ಹೊಸ ಉತ್ಸಾಹ ಬರುತ್ತದೆ. ಆದರೆ ಯಾರು ಯಾವ ದೇವಾಲಯಕ್ಕೆ ಹೋದರೂ ದೇವರನ್ನು ದರ್ಶಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಪ್ರದಕ್ಷಿಣೆ ಮಾಡಬೇಕು ಅಲ್ವಾ..? ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚು ಪ್ರದಕ್ಷಿಣೆ ಮಾಡಿದರೆ ಕೆಲವರು 3 ಪ್ರದಕ್ಷಿಣೆ ಸಾಕೆಂದು ಹೇಳಿ ಆ ಬಳಿಕ ದೇವರ ದರ್ಶನಕ್ಕಾಗಿ ಹೋಗುತ್ತಾರೆ. ಈ ರೀತಿ ಭಕ್ತರು ಬೇರೆ ಗುಡಿಗೆ ಹೋದಾಗ ಆ ರೀತಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದಕ್ಷಿಣೆ ಮಾಡಬಹುದು.

ಆದರೆ ಶಿವನ ಆಲಯಕ್ಕೆ ಹೋದಾಗ ಮಾತ್ರ ಕೆಳಗೆ ತಿಳಿಸಿದ ರೀತಿಯಲ್ಲಿ ಪ್ರದಕ್ಷಿಣೆ ಮಾಡಬೇಕು. ಆಗ ಯಾವ ರೀತಿಯ ಪ್ರತಿಫಲ ಸಿಗುತ್ತದೋ, ಇಷ್ಟಕ್ಕೂ ಆ ಪ್ರದಕ್ಷಿಣೆ ಹೇಗೆ ಮಾಡಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.
ಗರ್ಭಗುಡಿಯಲ್ಲಿರುವ ಶಿವನ ಎದುರು ನಂದಿ ಇದೆ. ಪಕ್ಕದಲ್ಲೇ ಲಿಂಗಕ್ಕೆ ಅಭಿಷೇಕ ಮಾಡಿದ ಜಲ ಹೋಗುತ್ತಿದೆ. ಅದರ ಕೆಳಗೆ ಚಂಡೀಶ್ವರನು ನೆಲೆಸಿದ್ದಾನೆ. ಆದರೆ ಶಿವಾಲಯದೊಳಗೆ ಹೋದ ಕೂಡಲೇ ನೇರವಾಗಿ ಶಿವನ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಮಾಡಬಾರದು.‌ ಮೊದಲು ನಂದೀಶ್ವರನಿಗೆ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿ ಚಂಡೀಶ್ವರ ಬಳಿಗೆ ಹೋಗಿ ದರ್ಶನ ಮಾಡಿಕೊಂಡು ಮತ್ತೆ ಹಿಂದಕ್ಕೆ ಬರಬೇಕು. ಆ ಬಳಿಕ ಚಿತ್ರದಲ್ಲಿ ತೋರಿಸಿದಂತೆ ಬಾಣದ ಗುರುತಿನ ಪ್ರಕಾರ ಪ್ರದಕ್ಷಿಣೆ ಮಾಡಬೇಕು. ಒಮ್ಮೆ ಚಂಡೀಶ್ವರನ ದರ್ಶಿಸಿಕೊಂಡು ಹಿಂದಕ್ಕೆ ಬಂದು ನಂದೀಶ್ವರನ ಬಳಿ ನಿಂತು ಗರ್ಭಗುಡಿಯಲ್ಲಿ ಲಿಂಗವನ್ನು ಅಭಿಷೇಕ ಮಾಡುವ ಜಲದ ಬಳಿ ಬರಬೇಕು. ಅಲ್ಲಿಂದ ಹಿಂದಕ್ಕೆ ತಿರುಗಿ ನಂದೀಶ್ವರನ ಬಳಿ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. ಈ ರೀತಿ 3 ಸಲ ಮಾಡಿದರೆ ಸಾಕು ಅದರಿಂದ ಸಾಕಷ್ಟು ಪ್ರತಿಫಲ ಸಿಗುತ್ತದೆ.

ಸಾಮಾನ್ಯವಾಗಿ ಭಕ್ತರು ದೇವಾಲಯಗಳಲ್ಲಿ 3 ಸಲ ಪ್ರದಕ್ಷಿಣೆ ಮಾಡುತ್ತಾರೆ. ಆದರೆ ಮೇಲೆ ತಿಳಿಸಿದ ರೀತಿಯಲ್ಲಿ ಶಿವಾಲಯದಲ್ಲಿ ಪ್ರದಕ್ಷಿಣೆ ಮಾಡಿದರೆ ಅದು 10 ಸಾವಿರ ಪ್ರದಕ್ಷಿಣೆಗಳಿಗೆ ಸಮಾನ. ಇದರ ಬಗ್ಗೆ ಲಿಂಗ ಪುರಾಣದಲ್ಲಿ ಹೇಳಲಾಗಿದೆ. ಆದರೆ ಮೇಲೆ ತಿಳಿಸಿದಂತೆ ಅಲ್ಲದೆ ಶಿವನ ಗರ್ಭಗುಡಿಯ ಸುತ್ತಲೂ ವೃತ್ತಾಕಾರವಾಗಿ ಪ್ರದಕ್ಷಿಣೆ ಮಾಡಬಾರದು. ಯಾಕೆಂದರೆ ಲಿಂಗವನ್ನು ಅಭಿಷೇಕ ಮಾಡಿದ ಜಲ ಹೋಗುವ ದಾರಿ ಬಳಿ ಪ್ರಮಥ ಗಣಗಳು ನೆಲೆಸಿರುತ್ತವೆ. ಅವನ್ನು ದಾಟಿ ಪ್ರದಕ್ಷಿಣೆ ಮಾಡಬಾರದು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.