Tuesday, October 23 , 2018 3:24 PM

ಚೇಳು ಕಡಿದರೇ ತಕ್ಷಣ ಏನು ಮಾಡಬೇಕು ಗೊತ್ತೇ..?


Tuesday, February 27th, 2018

scorpion bite

ಸ್ಪೆಷಲ್ ಡೆಸ್ಕ್: ಸರಿಸೃಪಗಳು ಅಂದರೆ ಹೆಚ್ಚಿನವರಿಗೆ ಭಯ. ಅದರಲ್ಲೂ ಹಾವು ಎಂದೊಡನೆ ಒಂಥರಾ ಭಯ. ಹಾವು ಕಡಿದಿದೆ ಎಂದರೆ ಪ್ರಾಣ ಹೋಗಿ ಬಿಡುತ್ತದೆ ಎಂಬ ಭಾವನೆ ಮೂಡುತ್ತದೆ. ವಿಷವಿರುವ ಹಾವುಗಳು, ವಿಷ ಇಲ್ಲದ ಹಾವುಗಳು ಇರುತ್ತದೆ. ವಿಷ ಸರ್ಪಗಳಿಗಿಂತ ವಿಷವಿಲ್ಲದ, ಅಪಾಯಕಾರಿ ಕಲ್ಪಿಸುವ ಹಾವುಗಳೇ ಹೆಚ್ಚು. ಆದರೆ ಹಾವು ಕಡಿತಕ್ಕೊಳಗಾದಾಗ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ವಿಷಸರ್ಪ ಕಚ್ಚಿದರೂ ನಾನಾ ರೀತಿಯ ಕಾರಣಗಳಿಂದ ನಿಧಾನವಾಗಿ ಕೆಲವರು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ‌. ವಿಷವಿಲ್ಲದ ಹಾವು ಕಚ್ಚಿದರೂ ಗಾಬರಿ ಹಾಗೂ ಭಯದಿಂದ ಕೆಲವರು ಪ್ರಾಣಪಾಯಕ್ಕೊಳಗಾಗುವ ಸಾಧ್ಯತೆ ಇದೆ.

ಹಾವು ನಮಗೆ ಶತ್ರುವಲ್ಲ. ತನ್ನ ಆತ್ಮ ರಕ್ಷಣೆಗೆ, ವಿಧಿ ಇಲ್ಲದ ಸಂದರ್ಭದಲ್ಲಿ ಮಾತ್ರವೇ ಕಚ್ಚುತ್ತವೆ. ಹಾವಿನ ಕಣ್ಣಿಗೆ ಬೀಳದಂತೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಒಂದು ವೇಳೆ ಹಾವು ಕಚ್ಚಿದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

ರಕ್ತದ ಹರಿವು  ಹೆಚ್ಚಾಗಿ ವಿಷ ಬಲು ಬೇಗನೇ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಬಂಧು ಮಿತ್ರರು ರೋಗಿಗೆ ಧೈರ್ಯ ಹೇಳಬೇಕು. ಹಾವು ಕಚ್ಚಿದೊಡನೆ ವಿಷ ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೂ, ಹೃದಯಕ್ಕೂ ಸೇರಿಕೊಳ್ಳುತ್ತದೆ. ಚೇಳು ಅಥವಾ ಹಾವು ಕಚ್ಚಿದ ಜಾಗಕ್ಕೆ ಆಪಲ್ ರಸದಲ್ಲಿ, ಅರ್ಧ ಗ್ರಾಂ ಕರ್ಪೂರ ಬೆರೆಸಿ ಅರ್ಧ ಗಂಟೆಗೊಮ್ಮೆ ರೋಗಿಗೆ ಕುಡಿಸುತ್ತಿದ್ದರೆ ದೇಹದಲ್ಲಿನ ವಿಷ ಬೆವರಿನ ರೂಪದಲ್ಲಿ, ಮೂತ್ರದ ರೂಪದಲ್ಲಿ ಹೊರಗೆ ಹೋಗುತ್ತದೆ. ಈ ಕರ್ಪೂರವನ್ನು ಔಷಧೀಯ ರೂಪದಲ್ಲಿ ಪೂರ್ವ ಕಾಲದಲ್ಲೂ ಉಪಯೋಗಿಸುತ್ತಿದ್ದರು.

ಕೆಲವು ರಾಜ್ಯಗಳಲ್ಲಿ ಕರ್ಪೂರವನ್ನು ಕುಡಿಯುವ ನೀರಿನಲ್ಲಿ ಹಾಕಿ ಉಪಯೋಗಿಸುತ್ತಾರೆ. ಹೀಗೆ ಮಾಡಿದರೆ ನೀರಿನಲ್ಲಿನ ಬ್ಯಾಕ್ಟೀರಿಯಾ, ಕಲುಷಿತ ಪದಾರ್ಥಗಳೆಲ್ಲವೂ ಹೋಗಿ ಸ್ವಚ್ಛವಾಗಿ ಬದಲಾಗುತ್ತದೆ. ನೀರಲ್ಲಿ ಕರ್ಪೂರದ ಬಿಳ್ಳೆಯನ್ನು ಹಾಕಿ ಮಂಚದ ಕೆಳಗೆ ಇಟ್ಟರೆ ಸೊಳ್ಳೆಗಳು ಬಾರದಂತೆ ತಡೆಯುತ್ತದೆ. ನಮ್ಮ ಮನೆಯಲ್ಲಿ ಕರ್ಪೂರವನ್ನು ಬೆಳಗಿಸಿದರೆ ಕಲುಷಿತ ಗಾಳಿಯನ್ನ ತೊಲಗಿಸಿ ವಾತಾವರಣವನ್ನು ಸ್ವಚ್ಚವಾಗಿರಿಸುತ್ತದೆ.

ಕೆಲ ಕರ್ಪೂರದ ಬಿಳ್ಳೆಯನ್ನು ಒಂದು ಉಂಡೆಯಲ್ಲಿ ಕಟ್ಟಿ ರಾತ್ರಿ ಮಲಗುವ ಮುನ್ನ ಕತ್ತಲ್ಲಿ ಹಾಕಿಕೊಂಡು ಮುಂಜಾನೆ ತೆಗೆದರೆ ನಮ್ಮ ದೇಹದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಜೀರ್ಣ ವ್ಯವಸ್ಥೆ ಹೆಚ್ಚಾಗುತ್ತದೆ. ಇದು ಇದರ ವಿಶೇಷತೆಗಳು..

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.