Saturday, August 18 , 2018 5:16 AM

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ರೈಲ್ವೆಯಲ್ಲಿ 62,907 ಹುದ್ದೆಗಳಿಗೆ ಅರ್ಜಿ ಆಹ್ವಾನ


Saturday, February 10th, 2018

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಖಾಲಿ ಇರುವ 62,907ಡಿ ಗ್ರೂಪ್‌ ಹುದ್ದೆಗಳಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದೆ. 62,907ಡಿ ಗ್ರೂಪ್‌ ಹುದ್ದೆಗಳಿಗೆ ಇಂದು ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 12 ಕೊನೆಯ ದಿನಾಂಕವಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬದಾಗಿದೆ. 

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ಐಟಿಐ ಪಾಸ್‌ ಆಗಿರಬೇಕು. ವಯಸ್ಸು ಕನಿಷ್ಟ 18 ಹಾಗೂ ಗರಿಷ್ಟ 31ರ ಒಳಗಿರಬೇಕು.

18 ಸಾವಿರ ರೂಪಾಯಿ ಸಂಬಳ, ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ತಿಂಗಳ 18 ಸಾವಿರ ರೂಪಾಯಿ ವೇತನ ಜೊತೆಗೆ 7ನೇ ವೇತನ ಆಯೋಗದ ಅನ್ವಯ ಭತ್ಯೆ ಸಿಗಲಿದೆ.

ಅರ್ಜಿ ಶುಲ್ಕ:  ಸಾಮಾನ್ಯ ವರ್ಗಕ್ಕೆ – 500 ರೂಪಾಯಿ , ಎಸ್‌ಸಿ/ಎಸ್‌ಟಿ, ಮಹಿಳೆ, ತೃತೀಯ ಲಿಂಗಿ, ಆರ್ಥಿಕ ಹಿಂದುಳಿದ ವರ್ಗ, ಮಾಜಿ ಸೈನಿಕ – 250 ರೂಪಾಯಿ

ಹುದ್ದೆಗಳ ವಿವರ: ಕ್ಯಾಬಿನ್‌ ಮ್ಯಾನ್‌, ಟ್ರ್ಯಾಕ್‌ಮ್ಯಾನ್‌, ಲೆವೆಲ್‌ ಮ್ಯಾನ್‌, ಪಿಯಿಂಟ್‌ಮ್ಯಾನ್‌, ಹೆಲ್ಪರ್‌-2, ಕೀ ಮ್ಯಾನ್‌, ಶಂಟರ್‌, ವೆಲ್ಡರ್‌, ಫಿಟ್ಟರ್‌, ಗ್ಯಾಂಗ್‌ಮ್ಯಾನ್‌, ಸ್ವಿಚ್‌ಮ್ಯಾನ್‌ ಸೇರಿದಂತೆ 16 ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.