Tuesday, October 23 , 2018 2:38 PM

ಆಲೂಗಡ್ಡೆ ಜ್ಯೂಸ್ ಮಾಡಿ ಕುಡಿದರೇ ಏನು ಲಾಭ ಗೊತ್ತೇ..?


Monday, February 26th, 2018

ಸ್ಪೆಷಲ್ ಡೆಸ್ಕ್: ನೀವು ವಿವಿಧ ಜ್ಯೂಸ್ ಗಳನ್ನ ಕುಡಿದಿರಬಹುದು. ಆದರೆ ಆಲೂಗಡ್ಡೆ ಜ್ಯೂಸ್ ಕುಡಿದಿರಲು ಸಾಧ್ಯನೇ ಇಲ್ಲ. ಆದರೆ ಇನ್ನು ಮುಂದೆ ಕುಡಿಯಿರಿ. ಯಾಕೆ ಅಂತಾ ಹೇಳುತ್ತೀವಿ ಕೇಳಿ.

ಆಲೂಗಡ್ಡೆ ಜ್ಯೂಸ್ ಚರ್ಮದಲ್ಲಿನ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡುತ್ತದೆ. ಇದಕ್ಕಾಗಿ ಆಲೂಗಡ್ಡೆಯ ಜ್ಯೂಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ ಎರಡು ಸಲ ತಂಪಾಗಿರುವ ಈ ಜ್ಯೂಸ್ ಅನ್ನು ಭಾದಿತ ಪ್ರದೇಶಕ್ಕೆ ಹಚ್ಚಿ.  ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಫೈಬರ್, ಪೊಟೇಷಿಯಂ ಮುಂತಾದ ಅಂಶಗಳು ಹೇರಳವಾಗಿವೆ. ಆಲೂಗಡ್ಡೆಯನ್ನು ಬಿಲ್ಲೆಗಳಾಗಿ ಮಾಡಿ ಕಪ್ಪು ವರ್ತುಲಗಳಿರವ ಕಡೆಗೆ ಉಜ್ಜಿಕೊಂಡು ಅವುಗಳನ್ನು ನಿವಾರಿಸಬಹುದು. ಅದೇ ರೀತಿ ಈ ಜ್ಯೂಸ್ ಕುಡಿಯುವುದರಿಂದಲೂ ನಮ್ಮ ಚರ್ಮದ ಕಾಂತಿಯನ್ನ ಹೆಚ್ಚಿಸಿಕೊಳ್ಳಬಹುದು.

ಈ ಜ್ಯೂಸ್ ನ ಸೇವನೆ ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಬಹುಬೇಗನೇ ನಿವಾರಿಸುತ್ತದೆ. ಅಲ್ಲದೇ ಚರ್ಮಕ್ಕೆ ಹೊಳಪು ನೀಡುವುದರ ಜತೆಗೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ನೀವು ಸದಾ ಯಂಗ್ ಆಗಿ ಕಾಣಬಹುದು.
ಹಸಿ ಆಲೂಗಡ್ಡೆ ಜ್ಯೂಸ್ ಸಂಧಿವಾತಕ್ಕೆ ಹೇಳಿ ಮಾಡಿಸಿದಂತಹ ಮನೆ ಮದ್ದು. ಉರಿಯೂತ ಶಮನಕಾರಿ ಗುಣ ಹೊಂದಿರುವ ಹಸಿ ಆಲೂಗಡ್ಡೆ ಜ್ಯೂಸ್ ಉರಿಯೂತ ಕಡಿಮೆ ಮಾಡಿ ನೋವು ಶಮನ ಮಾಡುವುದು. ಚಳಿಗಾಲದಲ್ಲಿ ಹೆಚ್ಚಾಗುವ ಸಂಧಿವಾತವು ಇದರಿಂದ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.