Saturday, August 18 , 2018 5:18 AM

ನಿಮ್ಮ ದೇವರ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ..!


Thursday, February 15th, 2018

pooja home

ಸ್ಪೆಷಲ್ ಡೆಸ್ಕ್: ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಕನಸಿನ ಮನೆ ಹೀಗಿರಬೇಕು ಎಂಬ ಕನಸುಗಳನ್ನು ಕಟ್ಟಿಕೊಳ್ಳೋದು ಸರ್ವೇಸಾಮಾನ್ಯ. ಅದರಲ್ಲಿಯೂ ಮನೆಯ ಒಳಾಂಗಣ ಸೌಂದರ್ಯಕ್ಕೆ ಇತ್ತೀಚಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇವರ ಮನೆಗಂತೂ ದೇವರೇ ಧರೆಗಿಳಿದು ಬಂದರೆ ಮೂರ್ಛೆ ಹೋಗುವಷ್ಟು ಸಿಂಗಾರ ಮಾಡಲಾಗಿರುತ್ತದೆ. ದೇವರ ಕೋಣೆ ಎನ್ನುವುದು ಧರ್ಮವನ್ನು ಮೀರಿದ ವಿಷಯವಾಗಿದ್ದು, ಮೊದಲಿನಿಂದಲೂ ಭಾರತೀಯರಿಗೆ ದೇವರ ಕೋಣೆ ಅಥವಾ ಗರ್ಭಗುಡಿ ಎನ್ನುವುದು ಪವಿತ್ರ ಸ್ಥಳವಾಗಿ ಉಳಿದುಕೊಂಡಿದೆ. ದಿನಂಪ್ರತಿ ಗರ್ಭಗುಡಿಗೆ ಹೋಗಿ ದೇವರಲ್ಲಿ ಮೊರೆ ಇಡುವುದನ್ನು ನಾವೆಲ್ಲರೂ ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ.

ಇಂತಹ ಪವಿತ್ರ ಕೋಣೆಯಲ್ಲಿ ಇಂತಿಷ್ಟ ಕೆಲಸಗಳನ್ನು ಮಾಡಬೇಕು ಅಥವಾ ಮಾಡಬಾರದು ಎಂಬ ನಿಯಮಗಳನ್ನು ನಮ್ಮ ಹಿರಿಯರು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ. ತಾತ್ವಿಕವಾಗಿ ಯೋಚಿಸುವುದಾದರೆ ಗರ್ಭಗುಡಿಯು ಹೆಚ್ಚಿನ ಧನಾತ್ಮಕ ಅಂಶಗಳನ್ನು ಒಳಗೊಂಡ ಸ್ಥಳವಾಗಿದ್ದು,ಈ ಸ್ಥಳದಲ್ಲಿ ಭಾರತೀಯರು ಒಂದು ಸಾಮಾನ್ಯ ತಪ್ಪು ಮಾಡುತ್ತಾರೆ. ನಮಗೆಲ್ಲರಿಗೂ ನಮ್ಮ ಪೂರ್ವಜರ ಬಗ್ಗೆ ಅಪಾರ ಗೌರವವಿದೆ. ಅವರ ನೆನಪು ನಮ್ಮಲ್ಲಿ ಸದಾ ಇರಲಿ ಎನ್ನುವ ಕಾರಣಕ್ಕೆ ಅವರ ಫೋಟೋಗಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇನ್ನು ಕೆಲವರು ಜನರು ಮರಣ ಹೊಂದಿದ ತಮ್ಮ ಹೆತ್ತವರ ಅಥವಾ ಹಿರಿಯರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜಿಸುತ್ತಾರೆ.

ಈ ರೀತಿ ಮಾಡುವುದು ತಪ್ಪು ಎನ್ನುವುದು ಹಲವು ಆಧ್ಯಾತ್ಮಿಕ ಗುರುಗಳ ಅಭಿಪ್ರಾಯವಾಗಿದೆ. ಹೌದು ಶಾಸ್ತ್ರಗಳ ಪ್ರಕಾರ ಒಬ್ಬ ಸತ್ತ ವ್ಯಕ್ತಿಗೆ ದೇವರ ಪಕ್ಕ ಇರಿಸಿ ಹೋಲಿಕೆ ಮಾಡಬಾರದು ಎಂಬ ಉಲೇಖವಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿ ಮನೆಯಲ್ಲಿ ಅಶಾಂತಿ ಇಂದ ಕೂಡಿರಲಿದೆ. ಇದು ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಸನಾತನ ಧರ್ಮವು ಪೂರ್ವಜರ ಫೋಟೋಗಳನ್ನೂ ಪೂಜಾ ಕೊಠಡಿಯಲ್ಲಿ ಇರಿಸುವುದನ್ನು ಖಂಡಿಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.