Saturday, August 18 , 2018 5:17 AM

ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರಿ ಮಾಡೋದ್ಯಾಕೆ..? ಇಲ್ಲಿದೆ ನೋಡಿ ಉತ್ತರ


Monday, February 19th, 2018

ಸ್ಪೆಷಲ್ ಡೆಸ್ಕ್: ನೀವು ‘ಮಂಗಳಮುಖಿ’ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಲೈಂಗಿಕ ಕಾರ್ಯಕರ್ತರನ್ನ ನೋಡಿರಬಹುದು. ಇವರ ಬಗ್ಗೆ ಕೇಳಿರಬಹುದು. ಈ ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸಲ್ಲ. ಇವರ ನೆಲೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ತುಂಬಾ ವಿಭಿನ್ನವಾಗಿ ಇರುತ್ತದೆ. ಜನನದಿಂದ ಹಿಡಿದು ಮರಣದ ವರೆಗೆ ಅವರು ನೀತಿ ನಿಯಮಗಳನ್ನ ಪಾಲನೆ ಮಾಡುತ್ತಾರೆ.

ಮಂಗಳಮುಖಿಯರು ಜೀವನವೂ ವಿಭಿನ್ನ. ಇವರ ನಿಧನದ ನಂತರ ನಡೆಯುವ ಅಂತ್ಯಸಂಸ್ಕಾರವೂ ವಿಭಿನ್ನ. ಮಂಗಳಮುಖಿಯರು ಸಾವನ್ನಪ್ಪಿದ್ದಾಗ ಇವರ ಸಮುದಾಯದಲ್ಲಿ ಶವವನ್ನ ಮುಚ್ಚಿಡಲಾಗುತ್ತದೆ. ಬೆಳಿಗ್ಗೆ ಇವರು ಶವಯಾತ್ರೆ ಮಾಡುವುದಿಲ್ಲ. ರಾತ್ರಿಯೇ ಶವದ ಅಂತ್ಯಸಂಸ್ಕಾರ ನಡೆಸುತ್ತಾರೆ.ಮಂಗಳಮುಖಿಯರ ಶವವನ್ನ ಯಾರು ನೋಡಬಾರದು ಎಂಬ ಕಾರಣಕ್ಕೆ ಈ ರೀತಿ ಶವಯಾತ್ರೆ ನಡೆಸುತ್ತಾರೆ. ಇವರ ಸಮುದಾಯ ಬಿಟ್ಟು ಬೇರೆ ಸಮುದಾಯದ ಮಂಗಳಮುಖಿಯರು ಈ ಶವಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಇನ್ನು ಇವರ ಸಮುದಾಯದಲ್ಲಿ ಸಾವು ನೋವುಂಟಾದರೆ ಯಾರು ಕಣ್ಣೀರು ಹಾಕುವುದಿಲ್ಲ. ಈ ನರಕ ಜೀವನದಿಂದ ಮುಕ್ತಿ ಸಿಕ್ಕಿದೆ ಎಂದು ನಂಬಿಕೆ ಇಟ್ಟುಕೊಂಡಿರುವುದೇ ಇದಕ್ಕೆ ಕಾರಣ. ಆಪ್ತರನ್ನ ಕಳೆದುಕೊಂಡ ದುಃಖ ಎಷ್ಟೇ ಇದ್ದರೂ ಕಣ್ಣೀರು ಹಾಕದೇ ಸುಮ್ಮನೆ ಇರುತ್ತಾರೆ. ಇನ್ನು ಹಿಂದೂ ಧರ್ಮವನ್ನ ಪಾಲಿಸುವ ಮಂಗಳಮುಖಿಯರು ಸಾವಿನ ಕ್ಷಣದಲ್ಲಿ ಶವಕ್ಕೆ ಚಪ್ಪಲಿಯೇಟು ನೀಡುತ್ತಾರೆ. ಎಲ್ಲಾ ಪಾಪ ಕಳೆಯಲಿ ಎಂಬುದೇ ಇದರ ಹಿಂದಿನ ಉದ್ದೇಶ. ಇನ್ನು ಮಂಗಳಮುಖಿಯರು ಶವವನ್ನ ಸುಡುವ ಬದಲು ಸಮಾಧಿ ಮಾಡುತ್ತಾರೆ. ಇದು ಹೆಚ್ಚಿನವರಿಗೆ ಗೊತ್ತಿರದ ಸತ್ಯ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.