Tuesday, October 23 , 2018 3:41 PM

ಯಾವ ಕಿವಿಯಲ್ಲಿಟ್ಟು ಮೊಬೈಲ್ ನಲ್ಲಿ ಮಾತನಾಡುವುದು ಒಳ್ಳೆಯದು..?


Monday, February 19th, 2018

mobile phone used

ಸ್ಪೆಷಲ್ ಡೆಸ್ಕ್: ಈ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದವರು ಯಾರು ಇದ್ದಾರೆ ಹೇಳಿ..? ಇದರಿಂದ ಎಷ್ಟು ಉಪಯೋಗಗಳು ಇದೆಯೋ ಅಷ್ಟೇ ನಷ್ಟಗಳು ಸಹ ಇವೆ. ಮುಖ್ಯವಾಗಿ ಮೊಬೈಲ್ ನಲ್ಲಿ ಹೆಚ್ಚಾಗಿ ಮಾತನಾಡುವುದು ಕೂಡ ಆರೋಗ್ಯಕ್ಕೆ ಹಾನಿಕರ. ಆದರೆ ಈದಿನಗಳಲ್ಲಿ ಕೈಯಲ್ಲಿ ಮೊಬೈಲ್ ಇಲ್ಲದೇ ದಿನವೇ ಹೋಗಲ್ವಂತೆ. ಮೊಬೈಲ್ ನಲ್ಲಿ ಮಾತನಾಡಿದರೆ ಅನಾರೋಗ್ಯ ಬರುವುದು ಹೇಗೆ..? ಹಾಗೆಯೇ ಅನಾರೋಗ್ಯ ಬಾರದಿರಲು  ಏನು ಮಾಡಬೇಕು ಗೊತ್ತೇ..? ಮೊಬೈಲ್ ನಿಂದ ರೇಡಿಯೇಷನ್ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದು.

ಆದರೆ ಆ ರೇಡಿಯೇಷನ್ ನಮ್ಮ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ ಯಾವುದೇ ಒಂದು ಲಿಮಿಟ್ ದಾಟಿದರೆ ಅಪಾಯಕಾರಿ ಅಲ್ಲವೇ..? ಹಾಗೆಯೇ ಮೊಬೈಲ್ ನಲ್ಲಿ ಹೆಚ್ಚು ಮಾತನಾಡಿದರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಬಲ ಕಿವಿ ಅಥವಾ ಎಡ ಕಿವಿಯಲ್ಲಿ ಮೊಬೈಲ್ ಇಟ್ಟು ಮಾತನಾಡುವ ಅಭ್ಯಾಸ ಇರುತ್ತದೆ. ಮತ್ತು ಯಾವ ಕಡೆ ಇಟ್ಟುಕೊಂಡು ಮಾತನಾಡಿದರೂ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಗೊತ್ತೇ..?

ಈ ಕುರಿತು ಸಂಶೋಧನೆ ನಡೆಸಿದ ಕೆಲವು ಡಾಕ್ಟರ್ ಗಳು 20-25 ವಯಸ್ಸಿನ ಯುವಕ ಯುವತಿಯರನ್ನ ಆರಿಸಿಕೊಂಡು ಅವರಲ್ಲಿ ಬಲಗಡೆ ಕಿವಿಯಲ್ಲಿಟ್ಟು ಮಾತನಾಡುವವರನ್ನು ಹಾಗೂ ಎಡ ಕಿವಿಯಲ್ಲಿ ಮಾತನಾಡುವವರ ಚಲನವಲನಗಳನ್ನ ಗಮನಿಸಲಾಯಿತು.

ಹಾಗೆಯೇ ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದ ನಂತರ ಬಲ ಕಿವಿಯಲ್ಲಿ ಮಾತನಾಡುವವರ ಸ್ಥಿತಿ ಮತ್ತು ಎಡ ಕಿವಿಯಲ್ಲಿ ಮಾತನಾಡುವವರಿಗಿಂತ ಹೆಚ್ಚಾಗಿ ಕ್ಷಿಣಿಸಿದೆ ಎಂದು ಗೊತ್ತಾಯಿತು. ಇದಕ್ಕೆ ಕಾರಣ ಅತಿಯಾದ ಮೊಬೈಲ್ ಬಳಕೆ. ಹೀಗಾಗಿ ಇನ್ನು ಮುಂದೆ ನೀವು ಮಾತನಾಡುವಾಗ ಫೋನ್ ಅನ್ನು ಕಿವಿಗೆ ಒತ್ತಿ ಹಿಡಿಯದೆ ಸ್ವಲ್ಪ ದೂರ ಇಟ್ಟು ಮಾತನಾಡುವುದು ಒಳ್ಳೆಯದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.