Saturday, August 18 , 2018 5:17 AM

ಮೊಬೈಲ್ ಗ್ರಾಹಕರು ತಪ್ಪದೇ ಓದ ಬೇಕಾದ ಸುದ್ದಿ ಇದು


Wednesday, February 21st, 2018

ನವದೆಹಲಿ : ಮೊಬೈಲ್ ಗ್ರಾಹಕರೇ ಇನ್ಮುಂದೆ ನಿಮ್ಮ ಮೊಬೈಲ್ ಸಂಖ್ಯೆ 10 ಅಂಕಿಗಳ ಬದಲಾಗಿ 13 ಅಂಕಿಗಳೊಂದಿಗೆ ಬರಲಿದೆ. ಜುಲೈ 1, 2018 ರ ನಂತರ 13 ಅಂಕಿಯ ಮೊಬೈಲ್ ಸಂಖ್ಯೆಗಳು ಜಾರಿಗೆ ಬರಲಿವೆ.

ಹೌದು, ಸಂವಹನ ಸಚಿವಾಲಯ ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಇದಕ್ಕಾಗಿ ಬಿಎಸ್ ಎನ್ ಎಲ್ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಅಧಿಕೃತ ಮೂಲಗಳ ಪ್ರಕಾರ ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಸಭೆಯಲ್ಲಿ 10 ಅಂಕಿಗಳ ಮಟ್ಟದಲ್ಲಿ ಹೊಸ ಮೊಬೈಲ್ ಸಂಖ್ಯೆಗಳಿಗೆ ಯಾವುದೇ ವ್ಯಾಪ್ತಿಯಿಲ್ಲ ಎಂದು ಹೇಳಲಾಗಿದೆ.  ಈ ಕಾರಣಕ್ಕಾಗಿ 10 ಕ್ಕಿಂತ ಹೆಚ್ಚಿನ ಅಂಕಿಗಳ ಸರಣಿಯನ್ನು ಪ್ರಾರಂಭಿಸಬೇಕು ಮತ್ತು ಎಲ್ಲಾ ಮೊಬೈಲ್ ಸಂಖ್ಯೆಗಳು 13 ಅಂಕಿಗಳಿಂದ ಮಾಡಲ್ಪಡಬೇಕು ಎಂದು ತಿಳಿದು ಬಂದಿದೆ.

ಪ್ರಸ್ತುತ ಬಳಕೆಯಲ್ಲಿರುವ 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಅಕ್ಟೋಬರ್ 1 ರಿಂದ 13 ಅಂಕಿಗಳಾಗಿ ನವೀಕರಿಸಲಾಗುತ್ತದೆ. ಈ ಕೆಲಸವು ಡಿ. 31 ರೊಳಗೆ ಪೂರ್ಣಗೊಳ್ಳುತ್ತದೆ. ಪ್ರಸ್ತುತ ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಸಂಖ್ಯೆಗಳಲ್ಲಿ ಅಥವಾ ಅಂತ್ಯದಲ್ಲಿ 3 ಅಂಕಿಗಳನ್ನು ಸೇರಿಸಲಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.