Wednesday, May 23 , 2018 10:02 PM

ಲಕ್ಷ್ಮೀದೇವಿ ನಿಮ್ಮ ಮನೆಯಲ್ಲೇ ಇರಬೇಕೇ..? ನೀರು ಕುಡಿಯುವಾಗ ಹೀಗೆ ಮಾಡಿ…


Sunday, February 25th, 2018

Maa Lakshmi
ಸ್ಪೆಷಲ್ ಡೆಸ್ಕ್: ಮನೆ ಎನ್ನುವುದಕ್ಕೆ ತುಂಬಾ ಪ್ರಾಮುಖ್ಯತೆ ಇರುತ್ತದೆ. ತನ್ನ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಬೇಕೆಂದುಕೊಳ್ಳುತ್ತಾನೆ. ಬಾಡಿಗೆ ಮನೆಯಲ್ಲಿ ಇದ್ದರೂ ನಿಯಮ, ನಿಬಂಧನೆಗಳಿಂದ ಮನೆಯನ್ನು ನಿರ್ಮಿಸಿಕೊಳ್ಳುತ್ತಾನೆ. ಯಾಕೆಂದರೆ ಮೊದಲಿನಿಂದಲೂ ಮನುಷ್ಯ ಕೆಟ್ಟದ್ದು, ಒಳ್ಳೆಯದನ್ನು ಕಲಿತುಕೊಳ್ಳುವುದು ಮನೆಯಿಂದಲೇ ಪ್ರಾರಂಭವಾಗುತ್ತದೆ. ನಂತರ ಜಗತ್ತಿನ ಮೂಲಕ ಎಲ್ಲವನ್ನೂ ಕಲಿಯುತ್ತಾನೆ. ಆದ್ದರಿಂದ ಬಾಲ್ಯದಿಂದಲೇ ಹಿರಿಯರು ನಿಯಮ ನಿಬಂಧನೆಗಳನ್ನು ಮನೆಯಲ್ಲಿ ಕಲಿಸುತ್ತಾರೆ.

ನಾವು ಮಾಡುವ ಹಲವು ಕೆಲಸಗಳನ್ನು ಹೇಗೆ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಶಾಸ್ತ್ರಗಳು ಹೇಳುತ್ತವೆಮದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅವುಗಳ ಬಗ್ಗೆ ತಿಳಿಯೋಣ. ಹಿಂದೂ ಧರ್ಮದ ಸಂಪ್ರದಾಯದಲ್ಲಿ ಹಾಲು, ನೀರು, ಧಾನ್ಯ ಇವುಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇವುಗಳನ್ನು ಪೂರ್ತಿಯಾಗಿ ಖಾಲಿಯಾಗುವ ಮೊದಲೇ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು.

ಇವುಗಳನ್ನು ಲಕ್ಷ್ಮೀಪ್ರದವಾಗಿ ಭಾವಿಸುತ್ತಾರೆ. ಇವು ಮನೆಯ ತುಂಬಾ ಇದ್ದರೆ ಧನ ಇರುತ್ತದೆ ಎಂದು ನಂಬುತ್ತಾರೆ. ದೇವರ ಕೋಣೆಯಲ್ಲಿ ಚೊಂಬಿನ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಿರಬೇಕು. ಅಡುಗೆ ಕೋಣೆಯಲ್ಲಿ ನೀರು ತುಂಬಿದ ಕೊಡ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ. ಸ್ನಾನದ ಕೊಠಡಿಯಲ್ಲಿಯೂ ಬಕೆಟ್ ಅಥವಾ ತೊಟ್ಟಿಗಳಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ನಾವು ನೀರನ್ನು ಕುಡಿಯುವಾಗ ಪೂರ್ತಿಯಾಗಿ ಕುಡಿಯದೆ ಸ್ವಲ್ಪ ನೀರನ್ನು ಉಳಿಸುವುದರಿಂದ ಲಕ್ಷ್ಮೀದೇವಿಯು ನಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಇಂತಹ ನಿಯಮಗಳನ್ನು ಪಾಲಿಸುವುದರಿಂದ ಕೆಲವೊಂದು ಕಷ್ಟಗಳಿಂದ ಪಾರಾಗಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.