Wednesday, January 23 , 2019 11:53 AM

ಗುಡಿಸುವಾಗ ಹೀಗೆ ಮಾಡಿ – ಇಲ್ಲದಿದ್ದರೆ ದಾರಿದ್ರ್ಯ ಬರುತ್ತದೆ..!


Saturday, February 24th, 2018

Maa Lakshmi
ಸ್ಪೆಷಲ್ ಡೆಸ್ಕ್: ಎಲ್ಲರ ಮನೆಯ ಬೆಳಕು ಗೃಹಿಣಿ ಎನ್ನುತ್ತಾರೆ. ಗೃಹಿಣಿಯರು ಮಾಡುವ ಕೆಲಸಗಳ ಮೇಲೆಯೇ ಆ ಮನೆಯ ಪರಿಸ್ಥಿತಿ ಆಧಾರವಾಗಿರುತ್ತದೆ. ಇದು ಹಲವು ಸಂದರ್ಭಗಳಲ್ಲಿ ಹಲವು ಕಡೆ ಸಾಬೀತಾಗಿದೆ. ಮನೆಯ ಕೆಲಸವನ್ನೆಲ್ಲಾ ಮಹಿಳೆಯರೇ ನೋಡಿಕೊಳ್ಳುತ್ತಾರೆ.

ಇದರಲ್ಲಿ ಯಾವುದೇ ಸಂಶಯವೂ ಇಲ್ಲ. ಆದರೆ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಆ ತಪ್ಪುಗಳಿಂದ ಆ ಮನೆಗೆ ಶನಿದೋಷ ಹೆಚ್ಚಾಗುವುದು, ದರಿದ್ರ ದೇವತೆಯು ನೆಲಸುವುದು, ಅನಾರೋಗ್ಯ ಸಮಸ್ಯೆಗಳು ಎದುರಾಗುವುದು, ವ್ಯಾಪಾರದಲ್ಲಿ ನಷ್ಟ ಉಂಟಾಗುವುದು ಇಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ.

ಇಂತಹ ಸಮಸ್ಯೆಗಳು ಬಾರಬಾರದು ಎಂದರೆ ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಯಾಕೆಂದರೆ ಪೊರಕೆಯು ಲಕ್ಷ್ಮೀದೇವಿಗೆ ಸಮಾನ. ನಮ್ಮ ಮನೆಯಲ್ಲಿರುವ ದಾರಿದ್ರ್ಯವನ್ನ ಓಡಿಸುವುದು ಆ ಪೊರಕೆಯೇ. ಆದ್ದರಿಂದ ಆ ಜಾಗ್ರತೆಗಳನ್ನು ತಪ್ಪದೇ ಪಾಲಿಸಿ. ಸಾಮಾನ್ಯವಾಗಿ ಮಹಿಳೆಯರು ದಿನಕ್ಕೆ 2 ಅಥವಾ 3 ಬಾರಿ ಮನೆಯನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. 2 ಹೊತ್ತು ಸ್ವಚ್ಚಗೊಳಿಸುವುದು ಒಳ್ಳೆಯದೆಂದು ಜ್ಯೋತಿಷ್ಯರು ಹೇಳುತ್ತಾರೆ.

ಸ್ವಚ್ಛಗೊಳಿಸುವ ಮೊದಲು ಈಶ್ವರನ ಸ್ಥಾನವಾದ ಈಶಾನ್ಯ ಭಾಗದಿಂದ ಪ್ರಾರಂಭಿಸಿ ಪೂರ್ವ, ಉತ್ತರ, ಪಶ್ಚಿಮ ಭಾಗದಿಂದ ಗುಡಿಸುತ್ತಾ ಆ ಕಸವನ್ನು ನೈಋತ್ಯ ಮೂಲೆಗೆ ಸಂಗ್ರಹಿಸಿಡಬೇಕು. ಮನೆಯಲ್ಲಿ ಎಷ್ಟು ಕೊಠಡಿಗಳಿದ್ದರೂ ಎಲ್ಲಾ ಕೊಠಡಿಗಳಲ್ಲೂ ಇದೇ ರೀತಿ ಮಾಡಬೇಕು. ಅಥವಾ ಮನೆಯ ಮೊದಲನೇ ಕೊಠಡಿಯಿಂದ ಈಶಾನ್ಯದಿಂದ ಆರಂಭಿಸಿ ಕೊನೆಗೆ ನೈಋತ್ಯ ಮೂಲೆಯಲ್ಲಿ ಸಂಗ್ರಹಿಸಿ ಕಸವನ್ನು ಹೊರಗೆ ಎಸೆಯಬೇಕು. ಹೀಗೆ ಒಂದು ಪದ್ಧತಿಯಂತೆ ಕಸ ಗುಡಿಸುವುದರಿಂದ ಶನೀಶ್ವರನು ಪ್ರಸನ್ನನಾಗುತ್ತಾನೆ.

ಆತ ನಿಮ್ಮನ್ನು ಅನುಗ್ರಹಿಸಿ ಐಶ್ವರ್ಯವನ್ನು ಪ್ರಸಾದಿಸುತ್ತಾನೆ. ಹೀಗೆ ಮಾಡಿದರೆ ಶನಿಯ ಅನುಗ್ರಹ ಮಾತ್ರವಲ್ಲದೆ ಲಕ್ಷ್ಮೀದೇವಿಯ ಅನುಗ್ರಹವೂ ಇರುತ್ತದೆ. ಆಕೆ ನಿಮಗೆ ಅಷ್ಟೈಶ್ವರ್ಯಗಳನ್ನೂ ಕರುಣಿಸುತ್ತಾನೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಕೆಲ ಮಹಿಳೆಯರು ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆಯನ್ನು ಕಾಲಿಗೆ ತಗಲುವಂತೆ ನಡೆಯುವುದು, ದಾಟುವುದು, ತುಳಿಯುವುದು ಮಾಡುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಶನೀಶ್ವರ ಹಾಗೂ ಲಕ್ಷ್ಮೀದೇವಿಯರಿಗೆ ತೀವ್ರ ಕೋಪ ತರಿಸಿದಂತೆ ಆಗುತ್ತದೆ. ಹೀಗೆ ಕೋಪ ಬಂದಾಗ ಆಕೆ ನಿಮ್ಮ ಮನೆಯಿಂದ ಹೊರಟುಹೋಗುತ್ತಾಳೆ. ಅಂದರೆ ನಿಮ್ಮ ಮನೆಯ ಯಜಮಾನನಿಗೆ ದರಿದ್ರ ಎದುರಾದಂತೆಯೇ.

ಆದ್ದರಿಂದ ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆ ಕಾಲಿಗೆ ತಾಕದಂತೆ, ದಾಟದಂತೆ ತುಳಿಯದಂತೆ ನೋಡಿಕೊಳ್ಳಿ.ಕಸವನ್ನು ಈಶಾನ್ಯದಿಂದ ನೈಋತ್ಯ ಮೂಲೆಗೆ ಕಸ ಸಂಗ್ರಹವಾಗುವಂತೆ ಗಮನಿಸಿ. ಹೀಗೆ ಮಾಡುವುದರಿಂದ ಶನೀಶ್ವರ ಹಾಗೂ ಲಕ್ಷ್ಮೀದೇವಿಯ ಅನುಗ್ರಹವು ನಿಮ್ಮನ್ನು ಸಿರಿವಂತರನ್ನಾಗಿ ಮಾಡುತ್ತವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.