Wednesday, January 23 , 2019 10:32 AM

ಅವತ್ತು ಕಾಶಿಯನ್ನ ಪರಮೇಶ್ವರ ಸೃಷ್ಟಿಸಿದ್ದು ಯಾಕೆ ಗೊತ್ತಾ..?


Friday, February 23rd, 2018

kashi vishwanath mandir

ಸ್ಪೆಷಲ್ ಡೆಸ್ಕ್: ವಾರಣಾಸಿಯನ್ನ ಸಾಕ್ಷಾತ್ ಪರಮೇಶ್ವರನ ಸೃಷ್ಟಿ ಎಂದು ಕರೆಯುತ್ತಾರೆ. ಶಿವನೇ ಈ ನಗರವನ್ನ ಸೃಷ್ಟಿಸಿದ್ದಾಗಿ ಪುರಾಣಗಳು ಹೇಳುತ್ತವೆ. ಅದೆಷ್ಟೋ ಸಾವಿರ ವರ್ಷಗಳಿಂದ ಕಾಶಿ ಕ್ಷೇತ್ರದಲ್ಲಿ ಜನಜೀವನ ಹಾಸುಹೊಕ್ಕಾಗಿದೆ. ಹಗಲು, ರಾತ್ರಿ ಎಂಬ ವ್ಯತ್ಯಾಸ ಇಲ್ಲದಂತೆ ನಿತ್ಯ ಸಾವಿರಾರು ಮಂದಿ ಯಾತ್ರಿಕರು ಈ ದಿವ್ಯ ಕ್ಷೇತ್ರಕ್ಕೆ ಬರುತ್ತಾರೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ವಿಶ್ವನಾಥಕ್ಷೇತ್ರ, ವಿಶಾಲಾಕ್ಷಿ ನೆಲೆಸಿರುವ ಪವಿತ್ರಭೂಮಿಯಾಗಿ, ಅನ್ನಪೂರ್ಣ ನೆಲವಾಗಿ ಈ ಕ್ಷೇತ್ರ ಖ್ಯಾತಿಗಳಿಸಿದೆ.

ಕಾಶಿ ಎಂದರೆ ಪವಿತ್ರಕ್ಷೇತ್ರ. ಆ ಕ್ಷೇತ್ರ ಪ್ರಾಶಸ್ತ್ಯವನ್ನು ವರ್ಣಿಸಲು ಮಾತುಗಳು ಸಾಕಾಗಲ್ಲ. ಸಾವಿರಾರು ಆಲಯಗಳು, ಗಂಗಾ ಆರತಿ ಕಾರ್ಯಕ್ರಮ, ನಿತ್ಯ ಪೂಜೆಗಳು, ಭಜನೆಗಳು, ಅರ್ಚನೆಗಳು, ಭಕ್ತರ ಸಂಭ್ರಮ ಯಾವಾಗಲೂ ಆಧ್ಯಾತ್ಮಿಕವಾಗಿ ಪರಿಮಳಿಸುತ್ತಾ ಇರುತ್ತದೆ. ಹಾಗಾಗಿಯೇ ಕಾಶಿ ಯಾತ್ರೆ ಬಗ್ಗೆ ನಮ್ಮ ಪೂರ್ವಿಕರು ಕಥೆಗಳಾಗಿ ಹೇಳುತ್ತಿರುತ್ತಾರೆ. ’ಕಾಶ್ಯಾನ್ತು ಮರಣಾನ್ ಮುಕ್ತಿ’ ಅಂದರೆ ಕಾಶಿಯಲ್ಲಿ ಮರಣಿಸಿದರೆ ಮೋಕ್ಷ ಲಭಿಸುತ್ತದೆಂದು ಪುರಾಣಗಳು ಹೇಳುತ್ತವೆ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ವಿಶಿಷ್ಟವಾದದ್ದು ಕಾಶಿ ವಿಶ್ವನಾಥನ ಎನ್ನುತ್ತಾರೆ. ಪವಿತ್ರ ಗಂಗಾನದಿ ತೀರದಲ್ಲಿ ಇರುವ ಈ ಮಂದಿರದಲ್ಲಿ ದೇವರನ್ನು ದರ್ಶಿಸಿಕೊಂಡರೆ ಅದೆಷ್ಟೋ ಪುಣ್ಯ ಲಭಿಸುತ್ತದೆ ಎನ್ನುತ್ತಾರೆ ಹಿರಿಯರು. ಅದೆಷ್ಟೋ ಸಾವಿರ ವರ್ಷಗಳಿಂದ ಈ ಆಲಯ ಹಲವು ದಂಡೆಯಾತ್ರೆಗಳ ಕಾರಣ ಶಿಥಿಲವಾಗಿದೆ. 18ನೇ ಶತಮಾನದಲ್ಲಿ ಮಹಾರಾಣಿ ಅಹಲ್ಯಾಭಾಯಿ ಹೋಲ್ಕರ್ ಆಲಯವನ್ನು ಪುನರ್‌ ನಿರ್ಮಿಸಿದರು. ರುಗ್ವೇದ, ರಾಮಾಯಣ, ಮಹಾಭಾರತ, ಸ್ಕಂದಪುರಾಣದಲ್ಲಿನ ಕಾಶಿಖಾಂಡದಲ್ಲಿ ಈ ಆಲಯದ ಬಗ್ಗೆ ವಿವರಗಳಿವೆ. ಗಂಗಾನದಿಯಲ್ಲಿ ಸ್ನಾನ ಮಾಡಿ ಸ್ವಾಮಿಯನ್ನು ದರ್ಶಿಸಿಕೊಂಡರೆ ಒಳ್ಳೆಯದು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಪ್ರಾಂಗಣದಲ್ಲಿ ಕಾಶಿ ವಿಶ್ವನಾಥನ ಮಂದಿರ ನಮೂನೆಯ ದೇವಾಲಯ ನಿರ್ಮಿಸಲಾಗಿದೆ. ಈ ಆಲಯವನ್ನು ಸಹ ವೀಕ್ಷಿಸಬಹುದು.

ಆ ಜಗನ್ಮಾತೆ ಕಾಶಿಯಲ್ಲಿ ವಿಶಾಲಾಕ್ಷಿಯಾಗಿ ನೆಲೆಸಿದ್ದಾರೆ. ಸತೀದೇವಿ ಕಿವಿಯ ಓಲೆ ಬಿದ್ದ ಪ್ರದೇಶದಲ್ಲೇ ಉಂಟಾದ ದೇವಿಯ ಕ್ಷೇತ್ರವಿದು. ಜ್ಯೋತಿರ್ಲಿಂಗಗಳ ಜತೆಗೆ ಶಕ್ತಿಪೀಠ ಆದಕಾರಣ ಈ ಕ್ಷೇತ್ರ ಆರಾಧ್ಯನಿಲಯ. ಆ ಆದಿ ದಂಪತಿಗಳಿಗೆ ಸ್ವತಃ ಉದ್ಭವಿಸಿದ ಅಪರೂಪದ ಕ್ಷೇತ್ರಗಳಲ್ಲಿ ಇದೂ ಒಂದು.

ಇನ್ನು ಸಕಲ ಪ್ರಾಣಕೋಟಿಗೆ ಚೋದಕಶಕ್ತಿ ಆಹಾರ. ಆಹಾರವನ್ನು ಆ ಲೋಕಮಾತೆಯೇ ನೀಡುತ್ತಾಳಾದ ಕಾರಣ ಅನ್ನಪೂರ್ಣ ಮಾತೆಯಾಗಿ ಕರೆಯುತ್ತಾರೆ. ಆಕೆ ಕರುಣೆ, ಕೃಪಾಕಟಾಕ್ಷೆ ಇಲ್ಲದಿದ್ದರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ. ಮಾನವರ ಹಸಿವನ್ನು ತೀರಿಸಲು ಆದಿಶಕ್ತಿ ಅನ್ನಪೂರ್ಣ ಮಾತೆಯಾಗಿ ಕಾಶಿಕ್ಷೇತ್ರದಲ್ಲಿ ನೆಲೆಸಿದ್ದಾಳೆ. ರಾಮಭಕ್ತ ಹನುಮಂತ ಆಲಯ ಸಂಕಟ ಮೋಚನ ಆಲಯವನ್ನು ಸಹ ವೀಕ್ಷಿಸಬೇಕು.

ಅದ್ವೈತ ಸಿದ್ಧಾಂತ ಕರ್ತರಾದ ಆದಿಶಂಕರರು ಈ ನಗರದೊಂದಿಗೆ ಒಳ್ಳೆಯ ಒಟನಾಡ ಹೊಂದಿದ್ದರು. ಅವರು ಇಲ್ಲೇ ಬ್ರಹ್ಮಸೂತ್ರಗಳನ್ನು, ಭಜಗೋವಿಂದಂ…ಇನ್ನಿತರೆ ಗ್ರಂಥಗಳನ್ನು ರಚಿಸಿದರು. ರಾಮಕೃಷ್ಣ ಪರಮಹಂಸರು, ಕಬೀರ್, ತುಳಸೀದಾಸರು, ರವಿದಾಸರು. ಈ ಕ್ಷೇತ್ರದ ಮಹತ್ವವನ್ನು ತಮ್ಮ ರಚನೆಗಳಲ್ಲಿ, ಮಾತುಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅಂತಿಮ ಸಂಸ್ಕಾರಕ್ಕೆ ನಿಲಯ,  ಕಾಶಿಯಲ್ಲಿ ಕಣ್ಣು ಮುಚ್ಚಿದರೆ ಶಿವಸಾಯುಜ್ಯ ಪಡೆಯುತ್ತಾರೆಂಬುದು ಆರ್ಯೋಕ್ತಿ. ಹಾಗಾಗಿ ವಯೋವೃದ್ಧರು ಅನೇಕ ಮಂದಿ ತಮ್ಮ ಅಂತ್ಯಕಾಲವನ್ನು ಕಳೆಯಬೇಕೆಂದು ಬರುತ್ತಿರುತ್ತಾರೆ. ಗಂಗಾತೀರದಲ್ಲಿ 80ಕ್ಕೂ ಹೆಚ್ಚು ಘಾಟ್‍ಗಳಿವೆ.

ಇವುಗಳಲ್ಲಿ ದಶಾಶ್ವಮೇಧ ಘಾಟ್, ಮಣಿಕರ್ಣಿಕ ಘಾಟ್, ಹರಿಶ್ಚಂದ್ರ ಘಾಟ್.. ಮುಖ್ಯವಾದವು. ದಶಾಶ್ವಮೇಥಾಘಾಟ್‌ನಲ್ಲಿ ಬ್ರಹ್ಮದೇವನು ಹತ್ತು ಅಶ್ವಮೇಧಯಾಗಳನ್ನು ಮಾಡಿದನೆಂದು ಪುರಾಣಗಳು ಹೇಳುತ್ತವೆ. ಈ ಘಾಟ್‌ಗಳಲ್ಲೇ ಗಂಗಾ ಆರತಿ ನಿರ್ವಹಿಸುತ್ತಾರೆ. ಮಣಿಕರ್ಣಿಕ ಘಾಟನ್ನು ಮಹಾವಿಷ್ಣುವೇ ನಿರ್ಮಿಸಿದ್ದಾಗಿ ಪುರಾಣಗಳು ಹೇಳುತ್ತವೆ. ಈ ಘಾಟನ್ನು ನಿರ್ಮಿಸುತ್ತಿರಬೇಕಾದರೆ ವಿಷ್ಣು ಕುಂಡಲ ಇದರಲ್ಲಿ ಬಿತ್ತಂತೆ. ಹಾಗಾಗಿ ಅಷ್ಟೆಲ್ಲಾ ಪವಿತ್ರ ಪ್ರದೇಶವಾಗಿ ಭಾವಿಸುತ್ತಾರೆ. ಇಲ್ಲಿ ಸತ್ತವರ ಕಿವಿಯಲ್ಲಿ ಮಹೇಶ್ವರನು ತಾರಕ ಮಂತ್ರ ಹೇಳುತ್ತಿರುತ್ತಾನೆಂಬ ಅಗಾಧ ನಂಬಿಕೆ ಭಕ್ತಕೋಟಿಯಲ್ಲಿದೆ. ಹರಿಶ್ಚಂದ್ರ ಘಾಟ್‌ನಲ್ಲಿ ಹರಿಶ್ಚಂದ್ರನೇ ಸ್ಮಶಾನ ಕಾಯುವ ಕಾಯಕ ಮಾಡುತ್ತಿದ್ದ ಕಾರಣ ಅವರ ಹೆಸರೇ ಈ ಘಾಟ್‌ಗೆ ಬಂದಿದೆ.

ಎಲ್ಲಾ ಧರ್ಮಗಳಿಗೂ ಪವಿತ್ರ ಭೂಮಿ ಕಾಶಿ ಕೇವಲ ಹಿಂದೂಗಳಿಗಷ್ಟೇ ಅಲ್ಲ ಬೌದ್ಧ, ಜೈನ ಧರ್ಮಗಳಿಗೆ ಪವಿತ್ರಭೂಮಿ. ಬೌದ್ಧರಿಗೆ ಪವಿತ್ರವಾದ ಸ್ಥಳಗಳಲ್ಲಿ ಇದು ಸಹ ಒಂದು. ಜೈನ ಧರ್ಮ 23ನೇ ತೀರ್ಥಂಕರನಾದ ಪಾರ್ಶ್ವನಾಥ ಇಲ್ಲೇ ಜನಿಸಿದ ಕಾರಣ ಜೈನರಿಗೂ ಪವಿತ್ರ ಕ್ಷೇತ್ರ. ಕಾಶಿ ಸಮೀಪದಲ್ಲಿ ಸಾರನಾಥದಲ್ಲಿ ಬುದ್ದ ಮೊದಲ ಭಾಷಣ ಮಾಡಿದ. ನಮ್ಮ ರಾಷ್ಟ್ರೀಯ ಚಿಹ್ನೆಯಾದ ಮೂರು ಸಿಂಹಗಳ ಸ್ಥೂಪ ಇಲ್ಲೇ ಉತ್ಖನದಲ್ಲಿ ಸಿಕ್ಕಿದ್ದು. ಇದು ಕಾಶಿ ಅಥವಾ ವಾರಣಾಸಿ ಹಿಂದಿನ ಕೌತುಕ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.