Tuesday, October 23 , 2018 2:44 PM

ಪದೇ ಪದೇ ಉರಿಮೂತ್ರವೇ..? ಇದಕ್ಕೆ ಇಲ್ಲಿದೆ ಪರಿಹಾರ…


Friday, March 2nd, 2018

ಕಷಾಯ

ಸ್ಪೆಷಲ್ ಡೆಸ್ಕ್:  ಕೆಲವರಿಗೆ ಒಂದು ಆರೋಗ್ಯ ಸಮಸ್ಯೆ ಇರುತ್ತದೆ. ಅದುವೇ ಉರಿಮೂತ್ರದ ಸಮಸ್ಯೆ.ಮೂತ್ರ ಪಿಂಡದ ಸಮಸ್ಯೆಯಿಂದ ಮನುಷ್ಯನ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೇ ಹಾಗೂ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಈ ಸಮಸ್ಯೆ ಕಾಡುತ್ತದೆ. ಮೂತ್ರದ ಸೋಂಕು ತಗುಲಿದಾಗ ಸಹಿಸಲಾಗದಷ್ಟು ನೋವಾಗುತ್ತದೆ.

ಅಲ್ಲದೇ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವಂತಾಗುತ್ತದೆ. ಈ ಸಂದರ್ಭದಲ್ಲಿ ಮೂತ್ರ ಬಾರದಿದ್ದರೂ ಅಥವಾ ಸ್ವಲ್ಪ ಮೂತ್ರ ವಿಸರ್ಜನೆಗೊಂಡು ನೋವುಂಟಾಗುತ್ತದೆ. ಕೆಲವರಿಗೆ ಮೂತ್ರದಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯೂ ಉಂಟು. ಮೂತ್ರದ ಸೋಂಕು ಕಡಿಮೆ ಪ್ರಮಾಣದಲ್ಲಿದ್ದಾಗ ವಿವಿಧ ಬಗೆಯ ಪಾನೀಯ ಮತ್ತು ನೀರನ್ನು ಸೇವಿಸುವುದರಿಂದ ಗುಣಮುಖರಾಗಬಹುದು.

ಮೂತ್ರದ ಸೋಂಕಿಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಚಿಕಿತ್ಸೆಯೇ ಪಾರ್ಸ್ಲಿ ಸೊಪ್ಪು. ಪಾರ್ಸ್ಲಿ ಮೂತ್ರದ ಸೋಂಕನ್ನು ನಿವಾರಿಸಿ, ಮೂತ್ರವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ.  ಮೂತ್ರ ಪಿಂಡದಲ್ಲಿ ಉತ್ಪತ್ತಿಯಾಗುವ ಸೋಡಿಯಂ ಮತ್ತು ಪೊಟ್ಯಾಸಿಯಂ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಮೂತ್ರದ ಬ್ಯಾಕ್ಟೀರಿಯಾಗಳು ಚದುರುವಿಕೆಗೆ ಒಳಗಾಗುತ್ತವೆ. ಮೂತ್ರದ ಸೋಂಕು ನಿವಾರಣೆಗೆ ಉತ್ತಮ ಔಷಧವೆಂದರೆ ಪಾರ್ಸ್ಲಿ ಚಹಾ. ಇದನ್ನು ಸುಲಭವಾಗಿ ಹೇಗೆ ಉಪಯೋಗಿಸಬಹುದು..?

ಬೇಕಾಗುವ ಪದಾರ್ಥಗಳು:  1. ನಾಲ್ಕು ಕಪ್ ನೀರು 2. ನಾಲ್ಕು ಚಮಚ ಹೆಚ್ಚಿದ ಪಾರ್ಸ್ಲಿ ಸೊಪ್ಪು

ಮಾಡುವ ವಿಧಾನ: ಮೊದಲಿಗೆ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಕುದಿಸಿ. ನೀರು ಚೆನ್ನಾಗಿ ಕುದಿಯಲಾರಂಭಿಸಿದ ಮೇಲೆ ಉರಿಯಿಂದ ಕೆಳಗಿಳಿಸಿ. ಹೆಚ್ಚಿಕೊಂಡ ನಾಲ್ಕು ಚಮಚ ಪಾರ್ಸ್ಲಿ ಸೊಪ್ಪನ್ನು ಬಿಸಿ ನೀರಿಗೆ ಹಾಕಿ. 20 ನಿಮಿಷಗಳ ಕಾಲ ಮುಚ್ಚಿಸಿ. ನಂತರ ಸೊಪ್ಪನ್ನು ನೀರಿನಿಂದ ಸೋಸಿ, ಸವಿಯಿರಿ. ಈ ಕಷಾಯ/ಚಹಾವನ್ನು ವಾರದಲ್ಲಿ ಕಡಿಮೆಯೆಂದರೂ ನಾಲ್ಕು ಬಾರಿ ಕುಡಿಯಬೇಕು. ಆಗ ರೋಗ ಲಕ್ಷಣವು ಕೇವಲ ಮೂರು ದಿನದಲ್ಲಿ ಗುಣವಾಗುತ್ತದೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.