Tuesday, October 23 , 2018 3:54 PM

ಈ 12 ರಾಶಿಗಳವರಿಗೆ ಈ ವೀಕ್‍ನೆಸ್ ಪಾಯಿಂಟ್ಸ್ ಇರುತ್ತದೆ..!


Sunday, February 25th, 2018

kannada astrology 03

ಸ್ಪೆಷಲ್ ಡಸ್ಕ್: ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಯಾವುದೋ ಒಂದು ವಿಚಾರಲ್ಲಿ ವೀಕ್‍ಸೆಸ್, ವೀಕ್ ಪಾಯಿಂಟ್ ಇರುತ್ತದೆ. ಅದರ ಬಗ್ಗೆ ಯಾರೂ ಇತರರಿಗೆ ತಿಳಿಸಲ್ಲ. ಯಾಕೆಂದರೆ ಇತರರಿಗೆ ನಮ್ಮ ವೀಕ್ ಪಾಯಿಂಟ್ ಗೊತ್ತಾದರೆ ಅವರು ನಮ್ಮನ್ನು ಏನು ಬೇಕಾದರು ಮಾಡಬಹುದು. ನಮಗೆ ಅನೇಕ ರೀತಿಯಲ್ಲಿ ನಷ್ಟ ಉಂಟು ಮಾಡಬಹುದು. ಹಾಗಾಗಿ ಯಾರೂ ಸಹ ತಮ್ಮ ವೀಕ್ ಪಾಯಿಂಟ್‌ಗಳನ್ನು ಇತರರಿಗೆ ಹೇಳಲ್ಲ. ಆದರೆ ತಮ್ಮ ತಮ್ಮ ರಾಶಿಗಳ ಪ್ರಕಾರ ಹಲವು ಕಾಮನ್ ವೀಕ್ ಪಾಯಿಂಟ್ಸ್, ವೀಕ್‍ನೆಸ್‌ಗಳು ಇರುತ್ತವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಮೇಷ:  ಮಾರ್ಚ್ 21- ಏಪ್ರಿಲ್ 19
ಇವರು ತಮ್ಮ ಸುತ್ತಲೂ ನಡೆಯುವ ಬಹಳಷ್ಟು ಸಂಗತಿಗಳನ್ನು ಗಮನಿಸುತ್ತಿರುತ್ತಾರೆ. ಅವುಗಳ ಮೇಲೆ ಕಂಟ್ರೋಲ್ ಸಾಧಿಸಬೇಕೆಂದು ಬಯಸುತ್ತಾರೆ. ಇವರಲ್ಲಿ ನಾಯಕತ್ವ ಲಕ್ಷಣಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇವರು ತಮ್ಮ ಸುತ್ತ ಏನಾದರೂ ಘಟನೆ ನಡೆದರೆ ಕೂಡಲೆ ಸ್ಪಂದಿಸುತ್ತಾರೆ. ಹಾಗಾಗಿ ತೊಂದರೆಗೆ ಸಿಕ್ಕಿಬೀಳುತ್ತಾರೆ. ಇದೇ ಈ ರಾಶಿಯವರ ವೀಕ್‌ನೆಸ್, ವೀಕ್ ಪಾಯಿಂಟ್.

ವೃಷಭ: ಏಪ್ರಿಲ್ 20 – ಮೇ 20
ವೃಷಭ ರಾಶಿಯವರು ತುಂಬಾ ನಂಬಿಕೆಯ ವ್ಯಕ್ತಿಗಳಾಗಿರುತ್ತಾರೆ. ಅದೇ ರೀತಿ ಇವರು ತುಂಬಾ ಸ್ಥಿರವಾಗಿ ಇರುವ ಗುಣವನ್ನು ಹೊಂದಿರುತ್ತಾರೆ. ಆದರೆ ಇವರಿಗೆ ಅಪಜಯಗಳು ಎದುರಾಗುತ್ತವೆಂದು ತುಂಬಾ ಭಯಬೀಳುತ್ತಿರುತ್ತಾರೆ. ಇದು ಇವರ ವೀಕ್‌ನೆಸ್. ಗೆಲುವಾದರೂ, ಸೋಲಾದರೂ ಯಾವುದಾದರೂ ಸರಿ ಎಂದು ಮುಂದಡಿ ಇಟ್ಟರೆ ಇವರಿಗೆ ಸಾಟಿ ಇರಲ್ಲ.

ಮಿಥುನ ರಾಶಿ: ಮೇ 21- ಜೂನ್ 20
ಇವರಿಗೆ ಒಂದು ಅಂಶದ ಬಗ್ಗೆ ಸ್ಥಿರವಾದ ಆಲೋಚನೆ ಇರಲ್ಲ. ನಿಮಿಷಕ್ಕೊಂದು ಆಲೋಚನೆ ಬರುತ್ತಿರುತ್ತದೆ. ಉದ್ಯೋಗ, ಹಾಬಿಗಳು, ಇತರೆ ಯಾವುದೇ ವಿಷಯವಾದರೂ ಸರಿ ಅನೇಕ ಸಲ ಯೋಚಿಸುತ್ತಾರೆ. ಇದರಿಂದ ತೊಂದರೆಗೆ ಸಿಕ್ಕಿ ಬೀಳುತ್ತಾರೆ. ಇದು ಇವರ ವೀಕ್‍ನೆಸ್.

ಕರ್ಕಾಟಕ ರಾಶಿ: ಜೂನ್ 21- ಜುಲೈ 22
ಈ ರಾಶಿಯವರಿಗೆ ಭಾವೋದ್ವೇಗಗಳು ಹೆಚ್ಚಾಗಿ ಇರುತ್ತವೆ. ಇವರು ಒಮ್ಮೊಮ್ಮೆ ಎಮೇಷನ್ಸ್ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಅವನ್ನು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ಹೊರಹಾಕುತ್ತಾರೆ. ಬೇರೆಯಾದರೂ ಒಂದು ಸಣ್ಣ ಮಾತು ಹೇಳಿದರೂ ಇವರ ಮನೋಭಾವನೆಗಳು ಘಾಸಿಗೊಳ್ಳುತ್ತವೆ. ಹಾಗಾಗಿ ಇರುವ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ನಿರಾಸೆಗೂ ಒಳಗಾಗುತ್ತಾರೆ. ಇವರು ಹೆಚ್ಚಾಗಿ ನಿರಾಶಾಜನಕವಾಗಿರುತ್ತಾರೆ. ಯಾವುದೇ ಸಂಗತಿ ಬಗ್ಗೆಯೂ ಆಸಕ್ತಿ ತೋರಲ್ಲ. ಇವರಿಗೆ ಇತರರ ಮೇಲೆ ಯಾವುದೇ ಕಾರಣಕ್ಕೂ ನಂಬಿಕೆ ಇರಲ್ಲ. ಇವೆಲ್ಲಾ ಇವರ ವೀಕ್‌ನೆಸ್ ಪಾಯಿಂಟ್ಸ್.

ಸಿಂಹ ರಾಶಿ: ಜುಲೈ 23- ಆಗಸ್ಟ್ 23
ಸಿಂಹರಾಶಿ ಅವರಿಗೆ ಸ್ವಲ್ಪ ಗರ್ವ, ಅಹಂಕಾರ ಹೆಚ್ಚಾಗಿ ಇರುತ್ತದೆ. ಇವರು ಪಕ್ಕದವರ ಜತೆಗೂ ಸ್ವಲ್ಪ ಗರ್ವದಿಂದ ಇರುತ್ತಾರೆ. ಇದೇ ಇವರ ವೀಕ್‌ನೆಸ್. ಇದರಿಂದ ಇವರಿಗೆ ಬಹಳಷ್ಟು ಮಂದಿ ದೂರವಾಗುತ್ತಾರೆ. ಇವರು ಇಗೋ ಬಿಟ್ಟರೆ ಹ್ಯಾಪಿಯಾಗಿ ಇರಬಹುದು.

ಕನ್ಯಾ ರಾಶಿ: ಆಗಸ್ಟ್ 24- ಸೆಪ್ಟೆಂಬರ್ 23
ಕನ್ಯಾ ರಾಶಿಯವರಿಗೆ ಬುದ್ಧಿ ಚೆನ್ನಾಗಿರುತ್ತದೆ. ಇವರು ಯಾವುದರ ಬಗ್ಗೆಯಾದರೂ ವಿಶ್ಲೇಷಣೆ ಮಾಡುತ್ತಾರೆ. ಇದೇ ಇವರ ಬಲ…ಬಲಹೀನತೆ. ಪ್ರತಿ ಸಮಸ್ಯೆಯನ್ನೂ ತಾವು ಪರಿಷ್ಕರಿಸಿಕೊಳ್ಳುತ್ತೇವೆಂಬ ಧೈರ್ಯಯಿಂದ ಇವರು ಇರುತ್ತಾರೆ. ಆದರೆ ಕೊನೆಗೆ ತಮ್ಮ ಸಮಸ್ಯೆಯನ್ನು ತಾವೇ ಪರಿಷ್ಕರಿಸಿಕೊಳ್ಳಲಾಗದ ಅಯೋಮಯ ಸ್ಥಿತಿಗೆ ಬೀಳುತ್ತಾರೆ. ಇದು ಕೂಡಾ ಇವರ ವೀಕ್‌ನೆಸ್.

ತುಲಾ: ಸೆಪ್ಟೆಂಬರ್ 24- ಅಕ್ಟೋಬರ್ 23
ಈ ರಾಶಿಯವರು ತುಂಬಾ ನೆಮ್ಮದಿಯಾಗಿ ಇರುತ್ತಾರೆ. ಶಾಂತಿಧೂತರಂತೆ ವರ್ತಿಸುತ್ತಾರೆ. ಆದರೆ ಇವರಿಗೆ ಶಾರ್ಟ್ ಟೆಂಪರ್ ಹೆಚ್ಚಾಗಿ ಇರುತ್ತದೆ. ಇವರಿಗೆ ಇದ್ದಕ್ಕಿದ್ದಂತೆ ಆಗಿಂದಾಗಲೆ ಕೋಪ ಬರುತ್ತದೆ. ಇದರಿಂದ ಸಹನೆ ಕಳೆದುಕೊಳ್ಳುತ್ತಾರೆ. ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಾರೆ. ಇದು ಇವರ ವೀಕ್‌ನೆಸ್ ಪಾಯಿಂಟ್.

ವೃಶ್ಚಿಕ ರಾಶಿ: ಅಕ್ಟೋಬರ್ 23 – ನವೆಂಬರ್ 22
ಈ ರಾಶಿಯವರು ಹೆಚ್ಚಾಗಿ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಇವರು ಶೃಂಗಾರ ಸಂಬಂಧಗಳನ್ನೂ ಹೆಚ್ಚಾಗಿ ಹೊಂದಿರುತ್ತಾರೆ. ಹಾಗಾಗಿ ಇವರು ಬಹಳಷ್ಟು ಸಂದರ್ಭಗಳಲ್ಲಿ ತೊಂದರೆ ಸಿಕ್ಕಿಬೀಳುತ್ತಾರೆ. ಇದು ಇವರ ವೀಕ್‌ನೆಸ್ ಪಾಯಿಂಟ್.

ಧನುಸ್ಸು ರಾಶಿ: ನವೆಂಬರ್ 23-ಡಿಸೆಂಬರ್ 22
ಈ ರಾಶಿಯವರು ಯಾವಾಗಲೂ ಬೋರ್ ಆಗಿ ಫೀಲ್ ಆಗುತ್ತಿರುತ್ತಾರೆ. ಇವರಿಗೆ ಹೆಚ್ಚು ಸಹನೆ, ತಾಳ್ಮೆ ಇರಲ್ಲ. ಇವರು ಬೇರೆಯವರು ಹೇಳಿದ್ದನ್ನು ಯಾವುದೇ ಕಾರಣಕ್ಕೂ ಕೇಳಲ್ಲ. ಹಾಗಾಗಿ ಇವರು ಬಹಳಷ್ಟು ಮಂದಿಯನ್ನು ದೂರ ಮಾಡಿಕೊಳ್ಳುತ್ತಾರೆ. ಇದೇ ಇವರ ವೀಕ್‍ನೆಸ್.

ಮಕರ ರಾಶಿ: ಡಿಸೆಂಬರ್ 23-ಜನವರಿ 20
ಈ ರಾಶಿಯವರು ಹಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಹಣ ಸಂಪಾದಿಸಲು ಹೆಚ್ಚು ಶ್ರಮ ವಹಿಸುತ್ತಾರೆ. ಇದರಿಂದ ಇವರು ಚಿಕ್ಕಪುಟ್ಟ ಆನಂದಗಳನ್ನು ಸಹ ಕಳೆದುಕೊಳ್ಳುತ್ತಾರೆ. ಅದೇ ರೀತಿ ಇವರು ಚಿಕ್ಕ ಕೆಲಸ ಮಾಡಿ ಅದನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ತಮ್ಮದೇ ಜಯ ಎಂದುಕೊಳ್ಳುತ್ತಾರೆ. ಇದೇ ಇವರ ವೀಕ್‌ನೆಸ್.

ಕುಂಭ ರಾಶಿ: ಜನವರಿ 21- ಫೆಬ್ರವರಿ 18
ಈ ರಾಶಿಯವರು ತಮ್ಮ ಮನಸ್ಸಿನಲ್ಲಿನ ವಿಷಯಗಳನ್ನು ಹೊರಗೆ ಇಡಲು ತುಂಬಾ ತೊಂದರೆ ಅನುಭವಿಸುತ್ತಿರುತ್ತಾರೆ. ಇವರಿಗೆ ತುಂಬಾ ಭಾವೋದ್ವೇಗಗಳು. ಆದರೆ ಅದನ್ನು ವ್ಯಕ್ತಪಡಿಸಲ್ಲ. ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಯ ಇವರಲ್ಲಿ ಇರುತ್ತದೆ. ಇದು ಇವರ ವೀಕ್‌ನೆಸ್.

ಮೀನ ರಾಶಿ: ಫೆಬ್ರವರಿ 19-ಮಾರ್ಚ್ 20
ಮೀನರಾಶಿಯವರಿಗೆ ಸಹ ಭಾವೋದ್ವೇಗಗಳು ಹೆಚ್ಚಾಗಿ ಇರುತ್ತವೆ. ಆದರೆ ಅವನ್ನು ಇವರು ವ್ಯಕ್ತಪಡಿಸುತ್ತಾರೆ. ಇವರಲ್ಲಿ ಸೃಜನಶೀಲತೆ ಹೆಚ್ಚಾಗಿ ಇರುತ್ತದೆ. ಆದರೆ ಅದನ್ನು ಹೊರತೆಗೆಯುವಲ್ಲಿ ತೊಂದರೆ ಅನುಭವಿಸುತ್ತಾರೆ. ಇದೇ ಇವರ ವೀಕ್‌ನೆಸ್ ಪಾಯಿಂಟ್.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.