Saturday, August 18 , 2018 5:17 AM

ನಿಮ್ಮದು ಈ ರಾಶಿಯೇ..? ಮಾರ್ಚ್ 1 ರಂದು ನಿಮಗೆ ಅದೃಷ್ಟದ ದಿನ..!


Friday, February 23rd, 2018

kannada astrology 03

ಸ್ಪೆಷಲ್ ಡೆಸ್ಕ್: ಭಾರತದೆಲ್ಲೆಡೆ ಹೋಳಿ ಹಬ್ಬವನ್ನು ಹಿರಿಯರು, ಕಿರಿಯರು ಎಂಬ ತಾರತಮ್ಯವಿಲ್ಲದೆ ಸಂತೋಷವಾಗಿ ಆಚರಿಸುತ್ತಾರೆ. ಈ ವರ್ಷ ಹೋಳಿ ಹಬ್ಬ ಮಾರ್ಚ್ 1 ರಂದು ಬರುತ್ತದೆ. ಎಲ್ಲರೂ ಬಣ್ಣಗಳನ್ನು ಒಬ್ಬರ ಮೇಲೊಬ್ಬರು ಎರಚಿ ಸಂತಸಿಸಲು ಕಾತುರರಾಗಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 1 ಹೋಳಿ ಹಬ್ಬದಂದು ಕೆಲವು ರಾಶಿಗಳವರಿಗೆ ಅದೃಷ್ಟ ಕೂಡಿಬರುತ್ತದಂತೆ. ಯಾವ ರಾಶಿಯವರಿಗೆ ಯಾವ ರೀತಿಯಲ್ಲಿ ಅದೃಷ್ಟ ಇದೆ ಎಂಬುದನ್ನ ನೋಡೋಣ..

ಮೇಷ : ಈ ವರ್ಷ ಈ ರಾಶಿಯವರಿಗೆ ಧನಲಾಭ ಉಂಟಾಗುತ್ತದೆ. ಈ ಹಿಂದೆ ಸಾಲವಾಗಿ ನೀಡಿದ್ದ ಹಣ ಮರಳಿ ಬರುತ್ತದೆ. ಕುಟುಂಬದಲ್ಲಿ ಸುಖ,ಸಂತೋಷಗಳು ನೆಲೆಗೊಳ್ಳುತ್ತವೆ. ಜೀವನ ಸಂಗಾತಿಯೊಂದಿಗೆ ಒಳ್ಳೆಯ ಕಾಲ ಕಳೆಯುತ್ತಾರೆ. ವ್ಯಾಪಾರದಲ್ಲಿ ಊಹಿಸಲಾರದ ಲಾಭವುಂಟಾಗುತ್ತದೆ.

ವೃಷಭ: ಯಾವುದಾದರೂ ವ್ಯಾಪಾರವನ್ನು ಪಾರಂಭಿಸಬೇಕಿದ್ದರೆ, ಇದು ನಿಮಗೆ ಒಳ್ಳೆಯ ಸಮಯ. ವ್ಯಾಪಾರ ವೃದ್ಧಿಯಾಗಿ ಲಾಭಗಳಿಸುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೂ ಅನುಕೂಲಕರವಾಗುತ್ತದೆ.

ಸಿಂಹ: ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ. ಆರ್ಥಿಕವಾಗಿ ಸಬಲರಾಗುತ್ತೀರಿ. ಕೋಪವನ್ನು ಕಡಿಮೆಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಪಾರ ನಷ್ಟವನ್ನು ಅನುಭವಿಸುತ್ತೀರಿ.

ತುಲಾ: ಉದ್ಯೋಗ ಹಾಗೂ ವ್ಯಾಪಾರದಲ್ಲಿ ಒಳ್ಳೆಯ ಯಶಸ್ಸನ್ನು ಕಾಣುತ್ತೀರಿ. ಉನ್ನತ ಮಟ್ಟಕ್ಕೇರುತ್ತೀರಿ. ಊಹಿಸದೇ ಧನಾಗಮವಾಗುತ್ತದೆ. ಕೀರ್ತಿ ಪ್ರತಿಷ್ಟೆಗಳು ಲಭಿಸುತ್ತವೆ.

ಮೀನ: ವ್ಯಾಪಾರದಲ್ಲಿ ಮುಂದುವರೆಯಲು ನಿಮಗೊಬ್ಬ ಗೆಳೆಯನ ಸಹಾಯ ಅಗತ್ಯವಿರುತ್ತದೆ. ಉದ್ಯೋಗ, ವ್ಯಾಪಾರದಲ್ಲಿ ಒಳ್ಳೆಯದಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.