Wednesday, May 23 , 2018 10:07 PM

ತನ್ನ ಯೋಧ ಪತಿಯ ಅಂತ್ಯಕ್ರಿಯೆಗೆ 5 ದಿವಸದ ಶಿಶುವಿನೊಂದಿಗೆ ಬಂದ ಪತ್ನಿ


Sunday, February 25th, 2018

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಆಸ್ಸೋಂನ ಜೋರ್ಹಾಟ್‌ನಲ್ಲಿ ಮೈಕ್ರೋಲೈಟ್‌ ಏರ್‌‌ಕ್ರಾಫ್ಟ್ ವಿಮಾನ ಪತನಗೊಂಡ ವೇಳೆಯಲ್ಲಿ  ವಿಂಗ್ ಕಮಾಂಡರ್ ಡಿ ವತ್ಸ್ ಸೇರಿದಂತೆ  ವಾಯುಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು.

ಇನ್ನು ಇದೇ ವೇಳೆ  ವಿಂಗ್ ಕಮಾಂಡರ್ ಡಿ ವತ್ಸ್ ಅವರ ಅಂತ್ಯಕ್ರಿಯೆ ಶನಿವಾರ ನಡೆದಿದೆ. ಈ ವೇಳೆ  ಅವರ ಅಂತ್ಯ ಸಂಸ್ಕಾರಕ್ಕಾಗಿ ಅವರ ಪತ್ನಿ ಐದು ದಿನಗಳ ಕಂದನೊಡನೆ ಹಾಜರಾಗಿದ್ದರು. ಮಹಿಳಾ ಸೇನಾಧಿಕಾರಿ ಮೇಜರ್ ಕುಮುದ್ ಡೊಗ್ರಾ ಅವರ ಪತಿ ಮೃತ ವಿಂಗ್ ಕಮಾಂಡರ್ ಡಿ ವತ್ಸ್. ಸೇನಾ ಸಮವಸ್ತ್ರ ಧರಿಸಿ ಪತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಮೇಜರ್ ಕುಮುದ್ ಡೊಗ್ರಾ ತಂದೆಯ ಮುಖವನ್ನೇ ಕಾಣದ ತಮ್ಮ ಐದು ದಿನಗಳ ಹಸುಗೂಸನ್ನು ತಮ್ಮ ಎದೆಗೆ ಅಪ್ಪಿಕೊಂಡು ಆಗಮಿಸಿದ್ದರು.

ಇನ್ನು  ಪತಿ ಮೃತ ವಿಂಗ್ ಕಮಾಂಡರ್ ಡಿ ವತ್ಸ್ ನ ಈ  ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ ಮಗುವಿನೊಡನೆ ಇರುವ ಅವರ ಚಿತ್ರ ವೈರಲ್ ಆಗುತ್ತಿದೆ. ತಮ್ಮ ಪತಿಯ ಸಾವಿನಂತಹ ದುಃಖದ ಸನ್ನಿವೇಶದಲ್ಲಿಯೂ ಈ ಮಹಿಳೆ ತೋರಿಸಿದ ಧೈರ್ಯವನ್ನು ಜನರು ಹೊಗಳುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.