Tuesday, October 23 , 2018 3:30 PM

ಹೃದಯದ ಆರೋಗ್ಯ ಚೆನ್ನಾಗಿರಬೇಕೇ..? ಈ ಆಹಾರ ವಸ್ತುಗಳನ್ನು ದೂರ ಇಡಲೇಬೇಕು..!


Tuesday, February 27th, 2018

ಸ್ಪೆಷಲ್ ಡೆಸ್ಕ್: ಇತ್ತೀಚಿಗೆ ಹೃದಯಾಘಾತದ ಸುದ್ದಿಯೇ ಹೆಚ್ಚಾಗಿದೆ. ಅದಕ್ಕೆ ಕಾರಣ ಕೂಡಾ ಇದೆ. ಯಾಕೆಂದರೆ ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅಂತಹ ಅಮೂಲ್ಯ ಹೃದಯವನ್ನು ಸುರಕ್ಷಿತವಾಗಿಡಲು ನೀವು ಕೆಲ ಆಹಾರಗಳನ್ನು ಆದಷ್ಟು ಕಡಿಮೆ ಮಾಡುವುದೇ ಒಳ್ಳೆಯದು.

ಉಪ್ಪು: ಉಪ್ಪು ಹೆಚ್ಚು ತಿಂದರೆ ರಕ್ತದೊತ್ತಡ ಹೆಚ್ಚುತ್ತದೆ. ಸಹಜವಾಗಿ ರಕ್ತದೊತ್ತಡ ಹೆಚ್ಚಾದಂತೆ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಉಪ್ಪು ಆದಷ್ಟು ಕಡಿಮೆ ಬಳಸಿದರೆ ಒಳ್ಳೆಯದು.

ರಿಫೈನ್ಡ್ ಆಹಾರ: ಪಿಜ್ಜಾ, ಬ್ರೆಡ್, ಬಿಳಿ ಅಕ್ಕಿ ಅನ್ನದಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಜಾಸ್ತಿ. ಇದು ನಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡುತ್ತದೆ. ಇದರಿಂದ ಹೃದಯ ಖಾಯಿಲೆ ಅಪಾಯ ಹೆಚ್ಚು.

ಸಾಫ್ಟ್ ಡ್ರಿಂಕ್ : ಸಾಫ್ಟ್ ಡ್ರಿಂಕ್ ಗಳಲ್ಲೂ ಸಕ್ಕರೆ ಅಂಶ ನಿಗದಿಗಿಂತ ಹೆಚ್ಚಿರುತ್ತದೆ. ಅಗತ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ನಮ್ಮ ದೇಹದಲ್ಲಿದ್ದರೆ, ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಬರುವುದು ಸಹಜ.

ಕರಿದ ತಿಂಡಿಗಳು: ಕರಿದ ತಿಂಡಿಗಳು ಬಾಯಿಗೆ ರುಚಿಕೊಡುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಜಾಸ್ತಿ. ಅಲ್ಲದೇ ಕೊಬ್ಬು ಹಾಗೂ ಸೋಡಿಯಂ ಅಂಶ ಜಾಸ್ತಿ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.