Saturday, August 18 , 2018 5:17 AM

ಹುಡುಗಿಯರು ಈ ರಾಶಿಯ ಹುಡುಗರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ..!


Friday, February 23rd, 2018

girls attractive to boys

ಸ್ಪೆಷಲ್ ಡೆಸ್ಕ್: ಒಂದು ಹೆಣ್ಣಿನ ಮನಸ್ಸನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಹೆಣ್ಣು ಯಾವುದೇ ವಿಚಾರಗಳಿಗೂ ಕೈ  ಹಾಕಲ್ಲ. ಹಾಗೆಯೇ ಸೈ ಅಂತ ಒಪ್ಪಿಗೆ ಕೂಡಾ ಕೊಡಲ್ಲ. ಪುರುಷರಿಗೆ ಹೆಣ್ಣಿನ ಮನಸ್ಸನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಆದರೆ ಕೆಲವು ರಾಶಿಯ ಪುರುಷರಿಗೆ ಹೆಣ್ಣು ಬೇಗನೆ ಆಕರ್ಷಿತಳಾಗುತ್ತಾಳೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕೆಲವು ರಾಶಿಯ ಪುರುಷರ ಇಷ್ಟ ಮತ್ತು ಕಷ್ಟಗಳು ಮಹಿಳೆಯರಿಗೆ ಬಹು ಬೇಗನೆ ಅರ್ಥವಾಗುತ್ತದೆ. ಮಿಥುನ ರಾಶಿಯ ಪುರುಷರು ತುಂಬಾ ಅದೃಷ್ಟವಂತರು. ಇವರು ಮಹಿಳೆಯರನ್ನ ಆಕರ್ಷಿಸಲು ಕಷ್ಟಪಡುವ ಅಗತ್ಯವಿಲ್ಲ. ಇವರು ತಮ್ಮ ಆಕರ್ಷಕ ಗುಣದಿಂದ ಮಹಿಳೆಯರನ್ನ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಈ ರಾಶಿಯವರ ನಿಲುವು, ಸ್ವಭಾವ ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತವೆ. ಇನ್ನು ಈ ರಾಶಿಯವರು ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಅನ್ನೋದನ್ನ ಚೆನ್ನಾಗಿ ತಿಳಿದಿರುತ್ತಾರೆ. ಇವರಲ್ಲಿ ಸ್ತ್ರೀಯರನ್ನ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ತುಂಬಾ ಹೆಚ್ಚಾಗಿ ಇರುತ್ತದೆ. ಹೀಗಾಗಿ ಈ ರಾಶಿಯವರು ಹುಡುಗಿಯರ ಮನಸ್ಸನ್ನ ಬಹುಬೇಗ ಗೆಲ್ಲುತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಎರಡನೆಯದು ಸಿಂಹ ರಾಶಿ. ಈ ರಾಶಿಯ ಪುರುಷರು ಮಹಿಳೆಯರೊಂದಿಗೆ ಸ್ನೇಹವನ್ನ ಬೆಳೆಸಲು ಮತ್ತು ಅವರೊಂದಿಗೆ ಮಾತನಾಡಲು ಯಾವುದೇ ಮುಜುಗರ ಪಡುವುದಿಲ್ಲ. ಈ ರಾಶಿಯವರು ತುಂಬಾ ಪ್ರಭಾವಶಾಲಿಯಾಗಿರುತ್ತಾರೆ. ಇವರು ಸ್ನೇಹಿತರಾಗಿ ವರ್ತಿಸುವ ಗುಣವನ್ನ ಹೊಂದಿರುತ್ತಾರೆ. ಈ ರಾಶಿಯವರು ತಮ್ಮ ನೋಟದಿಂದಲೇ ಹುಡುಗಿಯರನ್ನ ಆಕರ್ಷಿಸುತ್ತಾರೆ. ಇವರ ಉದಾರವಾದ ಭಾವನೆ ಮತ್ತು ಮನಸ್ಸು ಸ್ತ್ರೀಯರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಮೂರನೆಯದು ತುಲಾ ರಾಶಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಆಶ್ಚರ್ಯಕರ ವ್ಯಕ್ತಿತ್ವವನ್ನ ಹೊಂದಿರುತ್ತಾರೆ. ಇವರು ಸುಂದರವಾದ ಮಹಿಳೆಯರನ್ನ ತುಂಬಾ ಬೇಗ ಆಕರ್ಷಿಸುತ್ತಾರೆ. ಇನ್ನು ಇವರು ಪ್ರೀತಿಗೆ ಬಹಳ ಆಳವಾದ ಭಾವನೆಯನ್ನ ವ್ಯಕ್ತಪಡಿಸುತ್ತಾರೆ. ಇವರಲ್ಲಿ ಸ್ವಲ್ಪ ನಾಚಿಕೆಯ ಸ್ವಭಾವ ಇರುತ್ತದೆ.

ಇನ್ನು ಸೂಕ್ತ ಸಮಯದಲ್ಲಿ ಹುಡುಗಿಯರಿಗೆ ಸಮಯವನ್ನ ಮೀಸಲಿಡುತ್ತಾರೆ. ಇನ್ನು ತನ್ನ ಗೆಳತಿಗೆ ಉತ್ತಮ ರಕ್ಷಣೆಯನ್ನ ನೀಡುವಲ್ಲಿ ಮುಂದಾಳತ್ವವನ್ನ ವಹಿಸುತ್ತಾರೆ. ನಾಲ್ಕನೆಯದು ಮಕರ ರಾಶಿ. ಈ ರಾಶಿಯವರು ಅತ್ಯುತ್ತಮ ಆಕರ್ಷಣೆಯ ನೋಟವನ್ನ ಹೊಂದಿರುತ್ತಾರೆ. ಇವರು ತಮ್ಮ ನೋಟದಿಂದಲೇ ಸ್ತ್ರೀಯರನ್ನ ಬಹುಬೇಗ ಆಕರ್ಷಿಸುತ್ತಾರೆ. ಈ ರಾಶಿಯವರು ಸ್ತ್ರೀಯರಿಗೆ ತೋರುವ ಒಲವು ಮತ್ತು ಪ್ರೀತಿ ಇತರರಿಗಿಂತ ತುಂಬಾ ವಿಭಿನ್ನವಾಗಿರುತ್ತದೆ. ಇವರ ಕ್ರಿಯಾತ್ಮಕ ಸ್ವಭಾವ ಹುಡುಗಿಯರನ್ನ ಬಹುಬೇಗ ಆಕರ್ಷಿಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.