Wednesday, May 23 , 2018 9:58 PM

ಕಣ್ಣು ಈ ರೀತಿ ಅಲ್ಲಾಡಿದರೆ ಏನಾಗುತ್ತೆ ಗೊತ್ತಾ..?


Sunday, February 25th, 2018

eye blinking

ಸ್ಪೆಷಲ್ ಡೆಸ್ಕ್: ಮನುಷ್ಯ ಅಂದಮೇಲೆ ಹಲವು ರೀತಿಯ ಸೆಂಟಿಮೆಂಟ್ ಗಳಿರುತ್ತವೆ.ಅದರಲ್ಲಿ ಕಣ್ಣು ಹಾರುವುದು ಕೂಡಾ ಒಂದು. ಕಣ್ಣು ಹಾರಿದರೆ ಏನಾದರೂ ಅನಾಹುತ ನಡೆಯುತ್ತದೆ ಎಂದು ಭಾವಿಸಲಾಗುತ್ತದೆ. ಗಂಡಸರಿಗೆ ಬಲಗಣ್ಣು ಹಾಗೂ ಹೆಂಗಸರಿಗೆ ಎಡಗಣ್ಣು ಹಾರಿದರೆ ಶುಭವೆಂದು ಹೇಳಲಾಗುತ್ತದೆ.

ಹಾಗೆಯೇ ಗಂಡಸರಿಗೆ ಎಡಗಣ್ಣು ಹಾಗೂ ಹೆಂಗಸರಿಗೆ ಬಲಗಣ್ಣು ಹಾರಿದರೆ ಅಶುಭವೆಂದು ಹೇಳುತ್ತಾರೆ. ಚೀನಿಯರು ಸಹ ಇದನ್ನ ನಂಬುತ್ತಾರೆ. ಹಾಗೆಯೇ ಅವರ ಕಣ್ಣಿನ ಶಾಸ್ತ್ರದಂತೆ ಎಡಗಣ್ಣು ಹಾರಿದರೆ ದೊಡ್ಡ ವ್ಯಕ್ತಿಗಳು ಮನೆಗೆ ಬರುತ್ತಾರಂತೆ. ಬಲಗಣ್ಣು ಹಾರಿದರೆ ಔತಣಕ್ಕೆ ಆಹ್ವಾನ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು. ಅಮೆರಿಕನ್ನರು ಎಡಗಣ್ಣು ಹಾರಿದರೆ ನೆಂಟರು ಅಥವಾ ಅಪರಿಚಿತ ವ್ಯಕ್ತಿಗಳು ಮನೆಗೆ ಬರುತ್ತಾರೆಂದು ಹಾಗೂ ಬಲಗಣ್ಣು ಹಾರಿದರೆ ಶೀಘ್ರದಲ್ಲೇ ಆ ಮನೆಯಲ್ಲಿ ಮಗು ಜನಿಸುತ್ತದೆಂದೂ ನಂಬುತ್ತಾರೆ.

ಹೆಚ್ಚಿನ ಸಮಯ ಕಣ್ಣು ಹಾರುವುದರಿಂದ ತಪ್ಪದೆ ಅಶುಭವಾಗುತ್ತದೆ. ವಿಜ್ಞಾನದ ಪ್ರಕಾರ ಪೌಷ್ಟಿಕ ಆಹಾರದ ಕೊರತೆ, ನಿದ್ರಾಹೀನತೆ, ಕಲುಷಿತ ವಾತಾವರಣ ಹಾಗೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಕಣ್ಣುಗಳು ಹಾರುತ್ತವೆ. ಆದ್ದರಿಂದ ಕಣ್ಣು ಒಂದು ದಿನಕ್ಕಿಂತ ಹೆಚ್ಚು ದಿನಗಳು ಹಾರುತ್ತಿದ್ದಲ್ಲಿ ತಪ್ಪದೆ ಕಣ್ಣಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.