Tuesday, October 23 , 2018 3:13 PM

ನಿಮ್ಮ ಕಣ್ಣಿನ ದೃಷ್ಟಿಯನ್ನ ಹೀಗೆ ಹೆಚ್ಚಿಸಿಕೊಳ್ಳಿ..!


Thursday, March 1st, 2018

eye blinking

ಸ್ಪೆಷಲ್ ಡೆಸ್ಕ್: ಕೆಲವರಿಗೆ ದೃಷ್ಟಿ ಸಮಸ್ಯೆ ಇರಬಹುದು.  ಹೀಗಾಗಿ ಕನ್ನಡಕ ಅಥವಾ ಲೆನ್ಸುಗಳನ್ನ ಉಪಯೋಗಿಸಿಕೊಂಡು ಕಣ್ಣಿನ ದೃಷ್ಟಿಯನ್ನ ಕಾಪಾಡಲು ಪ್ರಯತ್ನಿಸಿರಬಹುದು‌. ಆದರೆ ಈ ಮೂಲಕವೂ ನೀವು ಕಣ್ಣಿನ ದೃಷ್ಟಿಯನ್ನ ಹೆಚ್ಚಿಸಿಕೊಳ್ಳಬಹುದು. ಅದು ಸಹಜ ಮಾರ್ಗದ ಮೂಲಕ. ಈ ಮೂಲಕ ನೀವು ಕಣ್ಣಿನ ನೋಟದ ಸಮಸ್ಯೆಯನ್ನ ಸರಿಪಡಿಸಿಕೊಳ್ಳಬಹುದು‌. ಅದಕ್ಕೆ ಬೇಕಾಗಿರುವುದು ವಾಲ್ ನಟ್ಸ್, ತುಪ್ಪ, ಕಲಬಂದ, ನಿಂಬೆ ಹಣ್ಣಿನ ರಸದ ಮಿಶ್ರಣ.

ಏನು ಮಾಡಬೇಕು..? ಅರ್ಧ ಕೆಜಿ ವಾಲ್ ನಟ್ ತುಂಡುಗಳು, 300 ಗ್ರಾಮ್ ನಷ್ಟು ಆರ್ಗಾನಿಕ್ ತುಪ್ಪ, 100ಗ್ರಾಂ ನಷ್ಟು ಕಲಬಂದ ಜೆಲ್, 4 ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ಇವುಗಳೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಊಟಕ್ಕೆ ಮೊದಲು ದಿನಕ್ಕೆ ಮೂರು ಬಾರಿ ಕಣ್ಣಿನ ನೋಟ ಮೆರುಗಾಗುವವರೆಗೂ ತೆಗೆದುಕೊಳ್ಳಬೇಕು. ಈ ಮಿಶ್ರಣದಲ್ಲಿನ ವಿಟಮಿನ್ ಗಳು ಕಣ್ಣಿನ ನೋಟ ಮೆರಗಾಗುವಂತೆ ಮಾಡುತ್ತದೆ.

ಆದರೆ  ಗರ್ಭೀಣಿಯಾಗಿ ಆರು ತಿಂಗಳು ದಾಟಿದವರು ಈ ಮಿಶ್ರಣವನ್ನು ತೆಗೆದುಕೊಳ್ಳಬಾರದು. ಮೂತ್ರ ಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿರುವವರು ಈ ಮಿಶ್ರಣವನ್ನು ತೆಗೆದುಕೊಳ್ಳದೇ ಇರುವುದು ಒಳ್ಳೆಯದು. ಕಲಬಂದ ಮಿಶ್ರಣಕ್ಕಾಗಿ ಉಪಯೋಗಿಸುವ ಕಲಬಂದ ತುಂಡುಗಳು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿರಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.