Saturday, August 18 , 2018 5:16 AM

ಕಿವಿಯೊಳಗಡೆ ಇರುವ ಮೇಣವನ್ನು ಕಾಟನ್ ಬುಡ್ಸ ಹಾಕಿ ತೆಗೆಯುತ್ತೀರಾ..? ತಪ್ಪದೇ ಈ ಸುದ್ದಿ ಓದಿ


Saturday, February 24th, 2018

cotton buds to ear

ಸ್ಪೆಷಲ್ ಡೆಸ್ಕ್: ನಿಮ್ಮ ಎರಡು ಕಿವಿಯಲ್ಲಿರುವ ಕಿವಿ ಮೇಣವನ್ನ ನೀವು ತೆಗೆಯುತ್ತೀರಾ..? ಹಾಗಾದರೆ ಹೇಗೆ ತೆಗೆಯುತ್ತೀರಾ..? ಕಾಟನ್ ಬುಡ್ಸ ಹಾಕಿ ತೆಗೆಯುತ್ತೀರಾ..?  ಈ ಕಾಟನ್ ಬಡ್ಸ್ ಬಳಸುವುದರಿಂದ ಕಿವಿಗೆ ಹಾನಿಯಾಗುತ್ತದೆ.  ನಮ್ಮ ಶರೀರದಲ್ಲಿರುವ ಅತ್ಯಂತ ಸೂಕ್ಷ್ಮವಾದ ಭಾಗಗಳಲ್ಲಿ ಕಿವಿ ಒಳಗೆ ಇರುವ ಭಾಗವು ಸಹ ಒಂದು. ಇದರಲ್ಲಿ ನರಗಳು ತುಂಬಾ ಸೂಕ್ಷ್ಮವಾಗಿರುತ್ತದೆ.

ಕಾಟನ್ ಬಡ್ಸ್ ಉಪಯೋಗಿಸುವುದರಿಂದ ಕಿವಿಯೊಳಗೆ ಇರುವ ಕೆಲವು ಸೂಕ್ಷ್ಮ ನರಗಳಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ. ಕಿವಿಯೊಳಗೆ ಗುಗ್ಗೆ ತೆಗೆಯಬೇಕು ಎಂದು ಕಾಟನ್ ಬಡ್ಸನ್ನ ಬಳಸುತ್ತೇವೆ. ಆದರೆ ಗುಗ್ಗೆ ತೆಗೆಯುವಾಗ ಇದು ಇನ್ನಷ್ಟು ಒಳಗೆ ಹೋಗಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಕಿವಿ ಕ್ಯಾನಲ್ ಗೆ ಅಡ್ಡವಾಗುತ್ತದೆ. ಇದರಿಂದ ಕಿವಿ ಕೇಳಿಸದೆ ಇರಬಹುದು. ಕಿವಿಯಲ್ಲಿ ಗುಗ್ಗೆ ಬರುವುದು ಸಾಮಾನ್ಯ. ಇದರಿಂದ ಯಾವುದೇ ತೊಂದರೆ ಇರಲ್ಲ. ಇನ್ನು ಗುಗ್ಗೆಗಳಲ್ಲಿ ಬ್ಯಾಕ್ಟೀರಿಯಾ ಇರುತ್ತದೆ.

ಇದು ಶರೀರದ ರೋಗ ನಿರೋಧಕಕ್ಕೆ ಸಹಕರಿಸುತ್ತದೆ. ಅದರಿಂದ ಕಿವಿಯನ್ನು ಶುಭ್ರಗೊಳಿಸುವುದಕ್ಕೆ ಗುಗ್ಗೆಗಳು ಬರುತ್ತವೆ. ಗುಗ್ಗೆಗಳು ತನ್ನಷ್ಟಕ್ಕೆ ತಾನೇ ಹೊರಟು ಹೋಗುತ್ತದೆ. ಅದನ್ನ ತೆಗೆಯುವುದಕ್ಕೆ ಕಾಟನ್ ಬಡ್ಸ್ ಯೂಸ್ ಮಾಡಬಾರದು. ಕೆಲವು ಮಂದಿಯಲ್ಲಿ ಗುಗ್ಗೆಗಳು ಹೆಚ್ಚು ತಯಾರಾಗುತ್ತದೆ. ಅಂತಹವರು ಒಂದು ಟೀ ಸ್ಪೂನ್ ಉಪ್ಪು ತೆಗೆದುಕೊಂಡು ಅರ್ಧ ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಬೇಕು. ನಂತರ ಕಾಟನನ್ನ ತೆಗೆದುಕೊಂಡು ಉಪ್ಪು, ಉಗುರು ಬೆಚ್ಚಗಿನ ನೀರಲ್ಲಿ ಆ ಕಾಟನನ್ನ ಡಿಪ್ ಮಾಡಿಕೊಂಡು ಕಿವಿ ಮೇಲಿನ ಭಾಗಕ್ಕೆ ಬರುವ ಹಾಗೇ ತಲೆಯನ್ನು ಒಂದು ಕಡೆ ಬಗ್ಗಿಸಿ ಆ ಕಾಟನ್ ನ ಕಿವಿಯೊಳಗೆ ಹಿಂಡಬೇಕು.

ಕಾಟನ್ ನಿಂದ ಸ್ವಲ್ಪ ಸ್ವಲ್ಪ ಡ್ರಾಪ್ ಕಿವಿಯೊಳಗೆ ಬೀಳುತ್ತದೆ. ಹಾಗೆಯೇ ಕಿವಿಯನ್ನ ಕಾಟನ್ ನಿಂದ ಮುಚ್ಚಿರಬೇಕು. ಮೂರು ಅಥವಾ ಐದು ನಿಮಿಷ ಹಾಗೆಯೇ ಬಗ್ಗಿಸಿರಬೇಕು. ಆ ಕಾಟನ್ ತೆಗೆದ ನಂತರ ಕಿವಿಯಲ್ಲಿ ಇದ್ದ ಗುಗ್ಗೆಗಳು ಹೊರಗೆ ಬರುತ್ತದೆ. ನಂತರ ಕಿವಿಯನ್ನು ನೀರಿನಿಂದ ಶುಭ್ರ ಮಾಡಬೇಕು. ಇದರಿಂದ ಗುಗ್ಗೆಗಳು ಹೋಗುತ್ತವೆ. ಉಪ್ಪು ಅಥವಾ ಬೇಬಿ ಆಯಿಲನ್ನ ಕೂಡ ಉಪಯೋಗಿಸಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.