Tuesday, October 23 , 2018 4:09 PM

ಪೂಜೆ ವೇಳೆ ತೆಂಗಿನಕಾಯಿ ಹೊಡೆಯುವಾಗ ಇದು ನೆನಪಿನಲ್ಲಿರಬೇಕು..!


Thursday, February 22nd, 2018

Coconut

ಸ್ಪೆಷಲ್ ಡೆಸ್ಕ್: ಹಿಂದೂ ಧರ್ಮದ ಸಂಪ್ರದಾಯದಲ್ಲಿ ಯಾವುದೇ ಪೂಜೆ ಮತ್ತು ಶುಭಕಾರ್ಯಗಳನ್ನ ಮಾಡಬೇಕೆಂದರೆ ಖಂಡಿತವಾಗಿ ತೆಂಗಿನಕಾಯಿ ಇರಲೇಬೇಕು. ತೆಂಗಿನಕಾಯಿಯ ಬಗ್ಗೆ ಪುರಾಣ ಇತಿಹಾಸಗಳಲ್ಲಿ ಸಹ ತುಂಬಾ ಸಲ ಉಲ್ಲೇಖಿಸಲಾಗಿದೆ. ತೆಂಗಿನ ಕಾಯಿಯನ್ನು ಮನುಷ್ಯರ ತಲೆಯ ಪ್ರತೀಕವಾಗಿ ಭಾವಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ತೆಂಗಿನಕಾಯಿಯನ್ನು ಹೊಡೆಯುವುದಕ್ಕೆ ಕೆಲವು ನಿಯಮಗಳು ಇದೆ. ಅದೇನು ಗೊತ್ತೇ..?

ಮೊದಲಿಗೆ ತೆಂಗಿನಕಾಯಿಯನ್ನು ಹೊಡೆಯುವಾಗ ಅದನ್ನ ನೀರಿನಿಂದ ಸ್ವಚ್ಛಪಡಿಸಿಕೊಳ್ಳಬೇಕು. ನಂತರ ತೆಂಗಿನ ಕಾಯಿಯನ್ನು ಕೈನಲ್ಲಿ ಹಿಡಿದುಕೊಂಡು ದೇವರನ್ನು ಸ್ಮರಿಸಬೇಕು. ತೆಂಗಿನ ಕಾಯಿಯನ್ನು ಯಾವಾಗಲೂ ಅಗ್ನಿಯ ದಿಕ್ಕಿನಲ್ಲಿ ಹೊಡೆಯಬೇಕು. ತೆಂಗಿನ ಕಾಯಿಯನ್ನು ಹೊಡೆಯುವಾಗ ಕನಿಷ್ಠ 9 ಅಂಗುಲ ಮೇಲಿನಿಂದ ಹೊಡೆಯುವಂತೆ ನೋಡಿಕೊಳ್ಳಬೇಕು. ಅದು ಸಮವಾಗಿ 2 ಭಾಗವಾಗಬೇಕು. ಅದು ಸ್ವಲ್ಪ ಹಾಗೇ,

ಹೀಗೆ ಇದ್ದರೂ ಪರವಾಗಿಲ್ಲ. ಅದು ಕೆಟ್ಟು ಹೋದರು ಪರವಾಗಿಲ್ಲ. ಆದರೆ ಅದನ್ನ ಅಶುಭ ಎಂದು ಭಯಪಡುವ ಅವಶ್ಯಕತೆ ಇಲ್ಲ. ನಂತರ ಕೈ ಕಾಲನ್ನು ತೊಳೆದುಕೊಂಡು‌ ಬೇರೆ ತೆಂಗಿನಕಾಯಿಯನ್ನು ಹೊಡೆದು ದೇವರಿಗೆ ಸಮರ್ಪಿಸಿದರೆ ಒಳ್ಳೆಯದಾಗುತ್ತದೆ. ಹೀಗೆ ಆಗಿದರೆ ‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಸರಿ ಹೋಗುತ್ತದೆ.

ತೆಂಗಿನ ಕಾಯಿಯನ್ನು ಹೊಡೆದಾಗ ಸರಿಯಾಗಿ 2 ವಿಭಾಗ ಮಾಡದೆ ದೇವರಿಗೆ ಅರ್ಪಿಸಬಾರದು. ಕೆಲ ಜನರು ತೆಂಗಿನಕಾಯಿ ಹೊಡೆದ ತಕ್ಷಣ ಆ ನೀರನ್ನು ತೆಂಗಿನಕಾಯಿಯಿಂದ ತಗೆಯದೆ ಹಾಗೆಯೇ ದೇವರಿಗೆ ಅಭಿಷೇಕ ಮಾಡುತ್ತಾರೆ. ಹೀಗೆ ಮಾಡಿದರೆ ಅದು ದೇವರಿಗೆ ಸಲ್ಲುವುದಿಲ್ಲ, ಯಾವಾಗಲೂ ತೆಂಗಿನಕಾಯಿ ನೀರನ್ನು ಬೇರೆ ಮಾಡಿದ ನಂತರವೇ ದೇವರಿಗೆ ಅಭಿಷೇಕ ಮಾಡಬೇಕು. ನಾವು ಭಕ್ತಿಯಿಂದ ಸಮರ್ಪಿಸುವ ತೆಂಗಿನಕಾಯಿಯನ್ನು ದೇವರು ಖಂಡಿತವಾಗಿ ಸ್ವೀಕರಿಸಿ ನಮ್ಮ ಇಷ್ಟಾರ್ಥ ಗಳನ್ನೂ ನೆರವೇರಿಸುತ್ತಾರೆ ಎಂದು ನಮ್ಮ ಭಾಗವದ್ಗೀತೆಯಲ್ಲಿಯೂ ಸಹ ಉಲ್ಲೇಖಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.