Wednesday, May 23 , 2018 9:53 PM

ಮಗುವಿನ ಹಣೆಗೆ ಕಪ್ಪು ಬೊಟ್ಟು ಇಡುವುದು ಯಾಕೆ ಗೊತ್ತೇ..?


Saturday, March 10th, 2018

ಸ್ಪೆಷಲ್ ಡೆಸ್ಕ್: ನಾವು, ನೀವು ನೋಡಿರಬಹುದು. ಮಗುವಿನ ಹಣೆಗೆ ಕಪ್ಪು ಬೊಟ್ಟು ಇಡುವುದನ್ನ. ಮಗು ಹಾಗೂ ಮಕ್ಕಳಿಗೆ ದೃಷ್ಟಿ ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದು ನಿಜವೇ..? ಹೌದು. ಬಹಳಷ್ಟು ಮಂದಿ ದೃಷ್ಟಿಯನ್ನು ನಂಬುತ್ತಾರೆ. ಇದಕ್ಕಾಗಿ ಮಕ್ಕಳಿಗೆ ದೃಷ್ಟಿ ತೆಗೆಯುತ್ತಾರೆ. ಆದರೆ ದೃಷ್ಟಿ ತೆಗೆಯುವ ಜತೆಗೆ ಮಕ್ಕಳಿಗೆ ಕಪ್ಪುಬೊಟ್ಟು ಇಡುತ್ತಾರೆ. ಯಾಕೆ ಗೊತ್ತೇ..?

ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ದೃಷ್ಟಿ ತಾಗಲ್ಲವಂತೆ. ಅಷ್ಟೇ ಅಲ್ಲ, ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೇ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ. ಇದರಿಂದ ಮಕ್ಕಳಿಗೆ ದೃಷ್ಟಿ ತಾಗುವುದಿಲ್ಲ ಎಂಬ ನಂಬಿಕೆ. ಇದರಿಂದ ಮಕ್ಕಳಿಗೆ ನೆಗಟೀವ್ ಎನರ್ಜಿ ಬಾರದೇ ಪಾಸಿಟಿವ್ ಎನರ್ಜಿ ಪ್ರಸಾರವಾಗುತ್ತದಂತೆ. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ನಂಬಿಕೆ. ಆದರೆ ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುವುದಷ್ಟೇ ಅಲ್ಲ, ಇನ್ನೂ ಕೆಲವು ವಿಧಗಳಲ್ಲಿ ಹೀಗೆ ಮಾಡುವುದರಿಂದ ಸಹ ಅವರಿಗೆ ದೃಷ್ಟಿ ತಾಗದ ಹಾಗೇ ಎಚ್ಚರಿಕೆ ವಹಿಸಬಹುದು.

ಕೆಂಪು, ಕಪ್ಪು, ಬಿಳಿ ಅನ್ನವನ್ನು ಮೂರು ಮುದ್ದೆ ಮಾಡಿಕೊಂಡು ಅವುಗಳಿಂದ ಭಾನುವಾರ ದೃಷ್ಟಿ ತೆಗೆದು ನಿವಾಳಿಸಿ ಎಸೆದರೆ ದೃಷ್ಟಿ ನಿವಾರಣೆಯಾಗುತ್ತದೆ. ಮೆಣಸಿನಕಾಯಿಯನ್ನು ಸುತ್ತಲೂ ಮೂರು ಬಾರಿ ನಿವಾಳಿಸಿ ಥೂ…ಥೂ…ಥೂ…ಎಂದು ಅವುಗಳಲ್ಲಿ ಉಗಿದರೂ ದೃಷ್ಟಿ ಹೋಗುತ್ತದೆ. ಪೊರಕೆ, ಚಪ್ಪಲಿಯನ್ನು ಅದೇ ರೀತಿ ಬಳಸಿ ದೃಷ್ಟಿ ತೆಗೆದರೂ ದೃಷ್ಟಿ ಹೋಗುತ್ತದೆ. ಕೊರಳಿಗೆ ಕಪ್ಪುದಾರ ಹಾಕಿದರೂ, ಕೈಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೂ ದೃಷ್ಟಿ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.