Tuesday, October 23 , 2018 3:03 PM

ನೀವು ಕೋಟಿ ಸಂಪಾದನೆ ಮಾಡಬೇಕೇ..? ಹಾಗಾದ್ರೇ ಈ ಐದು ರಾಶಿಯವರು ಹೀಗೆ ಮಾಡಿ…


Saturday, February 17th, 2018

ಸ್ಪೆಷಲ್ ಸ್ಟೋರಿ: ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ಒಮ್ಮೊಮ್ಮೆ ವಿಚಿತ್ರವಾಗಿರುತ್ತದೆ. ಹೆಚ್ಚಿನವರಿಗೆ ಭವಿಷ್ಯದಲ್ಲಿ ಎಷ್ಟೋ ಆಸೆಗಳು ಇರುತ್ತವೆ. ಅದನ್ನು ತೀರಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ ಇದರಲ್ಲಿ ಒಂದೊಂದು ಈಡೇರುತ್ತದೆ. ನಮ್ಮಲ್ಲಿ ತುಂಬ ಜನರು ಹಣವನ್ನು ಸಂಪಾದನೆ ಹೇಗೆ ಮಾಡಬೇಕೆಂದು ಕನಸು ಕಾಣುತ್ತಾರೆ. ಇದಕ್ಕಾಗಿ ಕೆಲವರು ತುಂಬಾ  ಕಷ್ಟ ಪಡುತ್ತಾರೆ. ಕೆಲವರಿಗೆ ಐಶ್ವರ್ಯ ಹೆಚ್ಚು ಕಷ್ಟವಿಲ್ಲದೆ ಬರುತ್ತದೆ. ಇನ್ನು ಕೆಲವರಿಗೆ ಎಷ್ಟು ಕಷ್ಟ ಬಿದ್ದರೂ ಸಹ ಐಶ್ವರ್ಯ ಸಿಗುವುದಿಲ್ಲ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಸಂಪಾದನೆ ಮಾಡುತ್ತಾನೋ ಅದು ಆತ ಹುಟ್ಟಿದ ರಾಶಿಯ ಮೇಲೆ ಆಧಾರವಾಗಿರುತ್ತದೆ. ಈ ಐದು ರಾಶಿಯವರನ್ನು ಐಶ್ವರ್ಯ ತುಂಬ ಸುಲಭವಾಗಿ ಒಲಿಯುತ್ತಾಳಂತೆ.

ಕನ್ಯಾ ರಾಶಿ: ಪ್ರಸ್ತುತ ಲೋಕದಲ್ಲಿ ಇರುವ ತುಂಬಾ ಜನ ಕೋಟ್ಯಧಿಪತಿಗಳು ಕನ್ಯಾ ರಾಶಿಗೆ ಸೇರಿದವರಂತೆ. ಇವರಲ್ಲಿ ಜಾಗ್ರತೆಯಿಂದ ಇರುವ ಗುಣ ಯಾವುದಾದರೂ ಕೆಲಸ ಮಾಡಿದರೆ ಅದರಲ್ಲಿ ಪರಿಪೂರ್ಣತೆ, ಖಚಿತತೆ ಇರುತ್ತದೆಯಂತೆ. ಯಾವುದೇ ಕೆಲಸ ಮಾಡಿದರೂ ಜಾಗ್ರತೆಯಿಂದ ಇರುತ್ತಾರಂತೆ. ಒಂದು ಕೆಲಸ ಪ್ರಾರಂಭಿಸಿದಾಗ ಎಷ್ಟು ಸಮಸ್ಯೆ ಬಂದರೂ ಸಹ ಭಯ ಬೀಳುವುದಿಲ್ಲವಂತೆ. ಶುರು ಮಾಡಿರುವ ಕೆಲಸ ಮುಗಿಯುವ ತನಕ ನಿದ್ದೆ ಹೋಗೋದಿಲ್ಲವಂತೆ.

ವೃಶ್ಚಿಕ ರಾಶಿ: ಈ ರಾಶಿಯವರು ಮಾನಸಿಕ ದೃಢತೆಯಿಂದ ಇರುತ್ತಾರೆ. ಇವರಿಗೆ ಹೊಸದಾಗಿ ಕಲಿಯಬೇಕು ಎಂಬ ಆಸಕ್ತಿ ಇರುತ್ತದೆ. ಈ ರಾಶಿಯವರು ಪರಿಶೋಧನೆ ಮಾಡುವುದರಲ್ಲಿ ಮಿಕ್ಕಿರುವ ರಾಶಿಗಳಿಗಿಂತ ಮುಂದಿರುತ್ತಾರಂತೆ. ಜೀವನದಲ್ಲಿ ಎಲ್ಲದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ತುಂಬಾನೇ ಇರುತ್ತದೆಯಂತೆ. ಈ ರಾಶಿಯವರು ತಮ್ಮ ಜೀವನವನ್ನು ತಮಗೆ ಇಷ್ಟವಾಗುವ ವಿಧಾನದಲ್ಲಿ ಬದುಕುವುದಕ್ಕೆ ಇಷ್ಟ ಪಡುತ್ತಾರಂತೆ. ಇವರಿಗೆ ಎಲ್ಲಾದರೂ ನಷ್ಟವಾದರೆ ಅದರ ಬಗ್ಗೆ ಚಿಂತೆ ಮಾಡಲ್ಲ.

ಸಿಂಹ ರಾಶಿ: ಈ ರಾಶಿಯವರಿಗೆ ತಮ್ಮ ನಡವಳಿಕೆಯಲ್ಲಿ ಇತರರನ್ನು ಆಕ್ರಮಿಸುವುದೆಂದರೆ ತುಂಬಾ ಇಷ್ಟ. ಒಂದು ಸಾರಿ ಇವರು ಏನೂ ಆಲೋಚನೆ ಮಾಡದೇ ಕೆಲಸ ಮಾಡುತ್ತಾರಂತೆ. ಇತರರನ್ನು ಮುಂದಕ್ಕೆ ನಡೆಸುವ ಗುಣ ಈ ರಾಶಿಯವರಲ್ಲಿ ತುಂಬಾನೇ ನೋಡಬಹುದು. ಇವರಿಗೆ ಇವರ ಮೇಲೆ ನಂಬಿಕೆ ತುಂಬಾ ಇರುತ್ತದೆ. ಜೊತೆಗೆ ಆತ್ಮವಿಶ್ವಾಸ ತುಂಬಾ ಇರುತ್ತದೆ. ಇವರಿಗೆ ಧೈರ್ಯ , ಶಕ್ತಿ ಮತ್ತು ಒಳ್ಳೆಯ ಗುಣವಿರುತ್ತದೆ. ಇವರು ಹುಟ್ಟುತ್ತಲೇ ನಾಯಕತ್ವ ಲಕ್ಷಣಗಳನ್ನು ಸಂಪಾದಿಸುತ್ತಾರೆ. ಸಿಂಹ ರಾಶಿಯವರು ತಮ್ಮ ಸಿದ್ದಾಂತವನ್ನ ನಂಬಿ ಯಾವುದೇ ಕೆಲಸವನ್ನ ಸಮಯಕ್ಕೆ ಮುಗಿಸುತ್ತಾರೆ.

ವೃಷಭ ರಾಶಿ: ಈ ರಾಶಿಯವರು ತಮ್ಮ ಮೇಲೆ ನಂಬಿಕೆ ಹೆಚ್ಚಾಗಿ ಇರಿಸಿಕೊಳ್ಳುವುದಿಲ್ಲ. ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಇವರಲ್ಲಿ ತಾಳ್ಮೆ , ವಿಶ್ವಾಸ ಹೆಚ್ಚಾಗಿ ಇರುತ್ತದೆ. ಇವರಿಗೆ ಮೊಂಡು ಮನಸ್ಸು ಹೆಚ್ಚಾಗಿ ಇರುತ್ತದೆ. ಆದರೆ ಇವರ ಈ ಮೊಂಡು ಧೈರ್ಯ ಅವರ ಲಕ್ಷ್ಯಕ್ಕೆ ದಾರಿಯಾಗುತ್ತದೆ. ಈ ರಾಶಿಯವರು ಬೇರೆಯವರಿಗೆ ಮೋಸ ಮಾಡಲ್ಲ. ಈ ರಾಶಿಯವರಿಗೆ ಧನವನ್ನು ಕಾಪಾಡಿಕೊಳ್ಳುವುದು ಅಭ್ಯಾಸವಾಗಿರುತ್ತದೆ.

ಕರ್ಕಾಟಕ ರಾಶಿ: ಇವರಲ್ಲಿ ಕುಟುಂಬದವರನ್ನು ಪ್ರೀತಿಸುವ ಗುಣ ಹೆಚ್ಚಾಗಿ ಇರುತ್ತದೆ. ಇವರಲ್ಲಿ ಪಕ್ಕದವರಿಗೆ ಸಹಾಯವನ್ನು ಮಾಡುವ ಗುಣ ಹೆಚ್ಚಾಗಿ ಇರುತ್ತದೆ. ಇವರಲ್ಲಿ ದಯಾ ಗುಣ ಹೆಚ್ಚಾಗಿ ಇರುತ್ತದೆ. ಸಮಯಕ್ಕೆ ತಕ್ಕ ಹಾಗೆ ಇವರಲ್ಲಿ ನಾವು ಕೋಪವನ್ನು ನೋಡಬಹುದು. ಇವರು ಮಾತಿನಿಂದ ಸಮಸ್ಯೆಯಲ್ಲಿರುವವರನ್ನು ತುಂಬಾ ಸುಲಭವಾಗಿ ನಗಿಸುತ್ತಾರೆ. ಸ್ನೇಹಿತರು ಕುಟುಂಬ ಸದಸ್ಯರೊಂದಿಗೆ ಇರುವುದಕ್ಕೆ ತುಂಬಾ ಇಷ್ಟಪಡುತ್ತಾರೆ. ಈ ರಾಶಿಯವರು ಯಾವುದೇ ಕೆಲಸವಾಗಲಿ ಅದನ್ನ ಶ್ರದ್ದೆಯಿಂದ ಮಾಡುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.