Saturday, August 18 , 2018 5:18 AM

ದುಡ್ಡು ಉಳಿಯುತ್ತಿಲ್ಲವೇ..? ಮನೆಯಲ್ಲಿ ಹೀಗೆ ಮಾಡಿ ಹಣ ಉಳಿಸಿ…


Sunday, February 18th, 2018

ammount india
ಸ್ಪೆಷಲ್ ಡೆಸ್ಕ್: ಜೀವನ ಸುಖಮಯವಾಗಿರಬೇಕೆಂದರೆ ಪ್ರೀತಿ, ವಿಶ್ವಾಸ ಇರಬೇಕು. ಅದರ ಜೊತೆ ಮಹಾಲಕ್ಷ್ಮೀಯೂ ಇರಬೇಕು. ಪ್ರೀತಿ, ವಿಶ್ವಾಸ ಎಷ್ಟು ಮುಖ್ಯನೋ ಅಷ್ಟೇ ಹಣ ಕೂಡ ಮುಖ್ಯ. ಆದರೆ ಏನೂ ಮಾಡಿದರು ಹಣ ಉಳಿತಾಯನೇ ಆಗುತ್ತಿಲ್ಲ. ಎಷ್ಟೇ ಹಣ ಬಂದರು ಸಾಲುವುದಿಲ್ಲ. ಎಷ್ಟೇ ಸಂಬಳ ಸಿಕ್ಕಿದರೂ ತಿಂಗಳ ಕೊನೆಯಲ್ಲಿ ಒಂದು ರೂಪಾಯಿಗೂ ಹೇಗಪ್ಪ ಅನ್ನೋ ಪರಿಸ್ಥಿತಿ ನಿರ್ಮಾಣವಾಗುತ್ತಿರುತ್ತದೆ. ಈ ರೀತಿಯ ಮಾತನ್ನು ನಾವೇ ಹೇಳುತ್ತಿರುತ್ತೇವೆ. ಇಲ್ಲ ಅಂದರೆ ಬೇರೆಯವರು ಹೇಳಿದ್ದನ್ನು ಕೇಳಿರುತ್ತೇವೆ. ಇದಕ್ಕೆ ಕಾರಣ ಏನು ಎಂದು ಹುಡುಕಿದರೆ ಕಾರಣದ ಪಟ್ಟಿ ಹೆಚ್ಚಾಗುತ್ತಾ ಹೋಗುತ್ತದೆ.

ಇದೇ ರೀತಿ ಇದ್ದರೆ ಎಲ್ಲವನ್ನು ಖರ್ಚು ಮಾಡುವುದಕ್ಕೂ ಆಗೋದಿಲ್ಲ ಅಲ್ವಾ..? ಮುಂದಿನ ಜೀವನಕ್ಕೆ ಸ್ವಲ್ಪ ಆದರೂ ಹಣ ಉಳಿತಾಯ ಮಾಡಿ ಇಡಲೇಬೇಕು. ಇದಕ್ಕೆ ಕಾರಣ ಏನು..? ಉಳಿತಾಯ ಮಾಡುವುದು ಹೇಗೆ..? ಇಲ್ಲ ಕೊಟ್ಟ ಹಣವನ್ನು ಹಿಂಪಡೆಯುವುದು ಹೇಗೆ ಎಂದು ಈಗ ತಿಳಿದುಕೊಳ್ಳೋಣ. ನಿಮ್ಮ ಮನೆಯ ವಾತಾವರಣ ಕೂಡ ಇದಕ್ಕೆ ಕಾರಣವಾಗಿರಬಹುದು ಅಥವಾ ನಿಮ್ಮ ಮನೆಯ ಮತ್ತು ಸುತ್ತಮುತ್ತಲಿರುವ ವಸ್ತುಗಳು ಇದಕ್ಕೆ ಕಾರಣವಿರಬಹುದು. ಅದು ಏನೇ ಆಗಿರಲಿ, ತಾಳೆ ಗ್ರಂಥದ ಪ್ರಕಾರ ನಿಮ್ಮ ಮನೆಯಲ್ಲಿ ಹೀಗೆ ಮಾಡಿ ಎಲ್ಲವೂ ಸರಿ ಹೋಗುತ್ತದೆ. ಲಕ್ಷ್ಮಿ ವಾಹನ. ಅರ್ಧ ಇಂಚಿನ ಬೆಳ್ಳಿ ವಿಗ್ರಹಗಳು ಅವು ಯಾವುದೆಂದರೆ ಗೂಬೆ,

ಕತ್ತೆ ಮತ್ತೊಂದು ನಾಯಿ. ಈ ಮೂರು ವಿಗ್ರಹವನ್ನು ತಂದು ಮೊದಲಿಗೆ ಗೂಬೆಗೆ ಒಂದು ಚಿಕ್ಕ ರೇಷ್ಮೆ ವಸ್ತ್ರವನ್ನು ಗಟ್ಟಿಯಾಗಿ ಸುತ್ತಿ ಕಟ್ಟಿ. ಕತ್ತೆಗೆ ಹಳದಿ ಅಥವಾ ಅರಶಿನ ಬಣ್ಣದ ವಸ್ತ್ರವನ್ನು (ಬಟ್ಟೆ) ಸುತ್ತಿ ಕಟ್ಟಿ. ಶ್ವಾನಕ್ಕೆ ಕೆಂಪು ವಸ್ತ್ರದಿಂದ ಸುತ್ತಿ ಕಟ್ಟಿ. ನಂತರ ಒಂದು ಪುಟ್ಟ ಮರದ ಪೆಟ್ಟಿಗೆ ತಗೊಂಡು ಅದರಲ್ಲಿ ವಿಗ್ರಹವನ್ನು ಇಟ್ಟು ಅದಕ್ಕೆ ಅಕ್ಷತೆ ಎಲ್ಲಾ ಹಾಕಿ ಪೂಜೆ ಮಾಡಿ. ಅದನ್ನು ದೇವರ ಮನೆಯಲ್ಲಿ ದಕ್ಷಿಣಾಭಿಮುಖವಾಗಿ ಇಡಿ. ಇದಕ್ಕೆ ಪ್ರತಿದಿನ ಪೂಜೆ ಮಾಡಬೇಕು. ನಿಮಗೆ ಹಣದ ಸಮಸ್ಯೆ ದೂರವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.