Tuesday, October 23 , 2018 3:09 PM

ಮಂಗಳವಾರ, ಶುಕ್ರವಾರ ಯಾಕೆ ಹಣ ನೀಡಬಾರದು..? ಇಲ್ಲಿದೆ ನೋಡಿ ಕಾರಣ


Wednesday, March 7th, 2018

ammountಸ್ಪೆಷಲ್ ಡೆಸ್ಕ್: ಪ್ರತಿ ಒಳ್ಳೆಯ ಕೆಲಸಕ್ಕೂ ಅರಿಶಿಣ ಬಳಸುವುದು ಸಂಪ್ರದಾಯ. ಅದರಲ್ಲೂ ಶುಭ ಕಾರ್ಯಗಳಲ್ಲಿ, ಯಜ್ಞದೀಕ್ಷಾ ಸಮಯಗಳಲ್ಲಿ ಬಟ್ಟೆಯನ್ನು ಅರಿಶಿಣ ನೀರಲ್ಲಿ ಹಾಕಿ ಒಣಗಿಸುವುದು ಅನಾದಿಕಾಲದಿಂದ ಬರುತ್ತಿರುವ ಆಚಾರ. ಈ ವೇಳೆ ಒಗೆದು ಒಣಗಿಸಿದ ವಸ್ತ್ರಗಳನ್ನು ಇತರರಿಗೆ ನೀಡಬಾರದು. ಹೊಸ ಬಟ್ಟೆಗಳನ್ನೇ ನೀಡಬೇಕು.

ಅರಿಶಿಣ ನೀರಿನಲ್ಲಿ ಒಗೆದರೆ ವಸ್ತ್ರಗಳು ಹಳೆಯದಾಗುತ್ತವೆ. ಹೀಗಾಗಿ ಅರಿಶಿಣ ನೀರಿನಲ್ಲಿ ಒಗೆದ ಫಲಕ್ಕಾಗಿ ಇತರರಿಗೆ ಹೊಸ ಬಟ್ಟೆ ನೀಡುವಾಗ ಅರಿಶಿಣ ಕೊಂಬು ಇಡುತ್ತಾರೆ. ಈ ರೀತಿ ಮಾಡುವುದು ಮಂಗಳಕರ ಎಂದು ಭಾವಿಸುತ್ತಾರೆ.

ಅರಿಶಿಣ ಕ್ರಿಮಿ ಸಂಹಾರಿಣಿ. ಅನೇಕ ಕೈಗಳು ಬದಲಾಗಿ ಬರುವ ಹೊಸ ಬಟ್ಟೆಗಳಲ್ಲಿ ಯಾವುದೇ ಕ್ರಿಮಿಗಳಿದ್ದರೂ ಅರಿಶಿಣ ನಿವಾರಿಸುತ್ತದೆ. ಆಗಾಗ ಧರಿಸಿದರೂ ಯಾವುದೇ ಅನಾರೋಗ್ಯ ಬರದಂತೆ ಇರುತ್ತದೆ ಎಂದು ಭಾವಿಸುತ್ತಾರೆ. ಶ್ರೀಮಹಾಲಕ್ಷ್ಮಿದೇವಿ ಶ್ರೀ ಭೃಗುಮಹರ್ಷಿ ಮಗಳು. ಶುಕ್ರವಾರಕ್ಕೆ ಮತ್ತೊಂದು ಹೆಸರು ಭೃಗುವಾರ. ಮಂಗಳವಾರ ಕುಜಗ್ರಹಕ್ಕೆ ಸಂಬಂಧಿಸಿದ್ದು. ಶುಕ್ರವಾರ ಯಾರಾದರೂ ಸಾಲ ಕೊಟ್ಟರೆ ತಿರುಗಿ ವಾಪಸ್ ಬರುವುದು ಕಷ್ಟ. ಮಂಗಳವಾರದ ದಿನ ಸಾಲ ನೀಡಿದರೆ ಜಗಳ ನಡೆಯುತ್ತದೆಂಬ ನಂಬಿಕೆ ಇದೆ.

ಹೀಗಾಗಿ ಈ ಎರಡು ದಿನಗಳಲ್ಲಿ ಯಾರಿಗೂ ಸಾಲ ನೀಡಲ್ಲ. ಇದು ಸಂಪೂರ್ಣ ಅಶಾಸ್ತ್ರೀಯವಾದ ವಾದ. ವಾಸ್ತವಕ್ಕೆ ಮಂಗಳ, ಶುಕ್ರವಾರಗಳಲ್ಲಿ ಸಾಲ ತೀರಿಸಿಕೊಳ್ಳಲು, ಸ್ವಂತಕ್ಕೆ, ಕುಟುಂಬದ ವ್ಯವಹಾರಗಳಿಗಾಗಿ ಧಾರಾಳವಾಗಿ ಖರ್ಚು ಮಾಡಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.