Wednesday, January 23 , 2019 10:42 AM

ಸ್ನಾನ ಆದ ನಂತರ ಮನೆ ಮುಂದೆ ಈ ಕೆಲಸ ಮಾಡಿ… ಸಂಪತ್ತು ನಿಮ್ಮದಾಗುತ್ತದೆ..!


Saturday, February 24th, 2018

bath water

ಸ್ಪೆಷಲ್ ಡೆಸ್ಕ್: ಹಣ, ಧನ ಯಾರಿಗೆ ಬೇಡ ಹೇಳಿ..? ಸಿರಿ ಸಂಪತ್ತು ಪ್ರತಿಯೊಬ್ಬರಿಗೂ ಬೇಕು. ಎಲ್ಲರೂ ದುಡಿಯುವುದು ಸಿರಿ ಸಂಪತ್ತಿಗಾಗಿ ಮತ್ತು ಹಣಕ್ಕಾಗಿ. ದುಡ್ಡು ಇದ್ದರೆ ಯಾವುದೇ ಕಷ್ಟಗಳು ಸುಗಮವಾಗಿ ಮತ್ತು ಸರಳವಾಗಿ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಹಣಕ್ಕಾಗಿ ಹಗಲು ಇರುಳು ದುಡಿಯುತ್ತಾರೆ. ಇನ್ನು ಲಕ್ ಖುಲಾಯಿಸಿತು ಅಂದರೆ ಆವರಷ್ಟು ಅದೃಷ್ಟವಂತರು ಯಾರು ಇಲ್ಲ. ಅದೃಷ್ಟ ಕೂಡಿ ಬರಬೇಕು ಅಂದರೆ ಅದೃಷ್ಟ ಲಕ್ಷ್ಮೀಯ ಅನುಗ್ರಹವಾಗಬೇಕು. ಇವಳ ಅನುಗ್ರಹವಾದರೆ ಕಷ್ಟಪಟ್ಟು ದುಡಿಯುವವರನ್ನ ಕೈ ಹಿಡಿದು ನಡೆಸುತ್ತಾಳೆ.

ಹಾಗಾದರೆ ಧನಲಕ್ಷ್ಮಿಯ ಅನುಗ್ರಹ ಸಿಗಬೇಕು ಅಂದರೆ ನಾವು ಪ್ರತಿನಿತ್ಯ ಬೆಳಿಗ್ಗೆ ತಲೆಸ್ನಾನ ಮಾಡಿ ಮನೆಯನ್ನ ಶುಚಿಯಾಗಿ ಇಟ್ಟುಕೊಳ್ಳಬೇಕು. ಹಾಗೆಯೇ ಮನೆಯ ಅಂಗಳವನ್ನ ಕೂಡ ಶುಚಿಯಾಗಿ ಮತ್ತು ಶುಭ್ರತೆಯಿಂದ ಕಾಪಾಡಿಕೊಳ್ಳಬೇಕು. ಮನೆಯ ಮುಂಭಾಗದಲ್ಲಿ ಶ್ರೀ ಮಹಾಲಕ್ಷ್ಮಿಯ ಪಾದುಕೆಯನ್ನ ಬಿಡಿಸಬೇಕು. ಅದು ಕೂಡ ಅರಿಶಿನ ಮಾತು ಕುಂಕುಮದಿಂದ ಅಲಂಕರಿಸಬೇಕು. ಹೀಗೆ ಪ್ರತಿನಿತ್ಯ ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗಿ ಮನೆಯನ್ನ ಪ್ರವೇಶ ಮಾಡುತ್ತಾಳೆ. ಇನ್ನು ಪಾದುಕೆಯನ್ನ ಬಿಡಿಸುವಾಗ ಒಂದು ವಿಷಯವನ್ನ ಗಮನಿಸಬೇಕು. ಆ ಪಾದುಕೆಗಳು ಮನೆಯ ಒಳಗಡೆ ಪ್ರವೇಶ ಮಾಡುವಂತೆ ಇರಬೇಕು ಇನ್ನು ಮಹಾಲಕ್ಷ್ಮಿಯನ್ನ ಕೆಂಪು ಹೂವುಗಳಿಂದ ಪೂಜೆ ಮಾಡಬೇಕು. ಮತ್ತು ಮನೆಯ ಬಾಗಿಲಿಗೆ ಕೆಂಪು ಹೂವಿನ ತೋರಣವನ್ನ ಕಟ್ಟಿ ಅಲಂಕರಿಸಿದರೆ ಮನೆಗೆ ಲಕ್ಷ್ಮೀ ಕಳೆ ಬಂದು ಲಕ್ಷ್ಮೀ ತಾನೇ ತಾನಾಗಿ ಮನೆಯನ್ನ ಪ್ರವೇಶ ಮಾಡುತ್ತಾಳೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.