Tuesday, October 23 , 2018 3:07 PM

ಗುಡ್ ನ್ಯೂಸ್ : ಇನ್ಮುಂದೆ ಮನೆಯಲ್ಲೇ ಕೂತು ನಿಮ್ಮ ಫೋನ್.ನಂ’ನ ಆಧಾರ್ ಗೆ ಲಿಂಕ್ ಮಾಡಿ, ಇಲ್ಲಿದೆ ನೋಡಿ ಮಾಹಿತಿ


Saturday, February 17th, 2018

ನವದೆಹಲಿ: ಪ್ರತಿಯೊಬ್ಬರು ಆಧಾರ್ ನ ಕಡ್ಡಾಯವಾಗಿ ತಮ್ಮ ಫೋನ್.ನಂ ಗೆ ಲಿಂಕ್ ಮಾಡಿರಲೇಬೇಕು ಇಲ್ಲದಿದ್ದರೆ ತಮ್ಮ ನಂ. ಅಸ್ಥಿಸ್ತ್ವ ಕಳೆದುಕೊಳ್ಳಬೇಕಾಗಿದೆ ಅಂತ ಕೇಂದ್ರ ಸರ್ಕಾರ ಅದೇಶ ನೀಡಿದೆ. ಈ ನಡುವೆ UIDAI ಬಿಡುಗಡೆ ಮಾಡಿದ ಹೊಸ ಸೇವೆಯ ಮೂಲಕ ಮನೆಯಲ್ಲೇ ಕೂತು ತುಂಬಾ ಸರಳ ವಿಧಾನದಲ್ಲಿ ಈ ಕೆಲಸವನ್ನು ಮಾಡಬಹುದಾಗಿದೆ.

ಅಂದ ಹಾಗೇ ತಮ್ಮ ಗ್ರಾಹಕರು ತಮ್ಮ ಮೋಬೈಲ್ ನಂಬರ್ ಗೆ ಆಧಾರ್ ಕಾರ್ಡ್ ನಂಬರ್ ಅನ್ನು ಜೋಡಿಸುವ ಪ್ರತಿಕ್ರಿಯನ್ನು ಪೂರ್ಣಗೊಳಿಸಲು ಮಾರ್ಚ್ 31 2018 ಕೊನೆಯ ದಿನವಾಗಿರುತ್ತದೆ, ಅಷ್ಟರೊಳಗೆ ಲಿಂಕ್ ಮಾಡದಿದ್ದಲ್ಲಿ ನಿಮ್ಮ ನಂ. ಚಾಲನೆಯನ್ನು ಕಳೆದುಕೊಳ್ಳಲಿದೆ

ಏರ್ಟೆಲ್, ಐಡಿಯಾ, & ವೊಡಾಫೋನ್ ಈ ಸೇವೆಯನ್ನು ಈ ನೆಟ್ ವರ್ಕ್ ನ ಮೋಬೈಲ್ ಗ್ರಾಹಕರು ಈ ಕೆಳಗೆ ಸಂಪೂರ್ಣ ವಿಧಾನವನ್ನು  ಹೇಳಲಾಗಿದೆ.
1. ಮೊದಲಿಗೆ ನಿಮ್ಮ ಫೋನ್ ನಿಂದ 14546 ಸುಂಕ ರಹಿತ ಸಂಖ್ಯೆಗೆ ಕರೆ ಮಾಡಿ.
2. ನಂತರ ನಿಮ್ಮ ಆಯ್ಕೆಗೆ ಅನುಗುಣವಾಗಿ ಭಾಷೆಯನ್ನು ಆಯ್ಕೆ ಮಾಡಿ.
3. ಸಂಖ್ಯೆ 1ನ್ನು ಒತ್ತಿ ನಿಮ್ಮ ರಾಷ್ಟ್ರೀಯತೆ ಆಯ್ಕೆಮಾಡಿಕೊಳ್ಳಿ.
4. ನಂತರ ನಿಮ್ಮ ಟೆಲಿಕಾಂ ತಂಡದೊಂದಿಗೆ ಆಧಾರ್’ನ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ, ಅದರ ಅನುಮತಿಗಾಗಿ 1ನ್ನು ನಮೂದಿಸಿ.
5. ನಂತರ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
6. ನಂತರ ಆ ನಂಬರಿಗೆ ಆಧಾರ್ ವತಿಯಿಂದ ಸಂದೇಶ ಬರುತ್ತದೆ, ಅದರಲ್ಲಿ ತೋರುವ 6 ಅಂಕೆಗಳ ಓ.ಟಿ.ಪಿ ಯನ್ನು ನಮೂದಿಸಿ – ಧೃಡೀಕರಿಸಲು 1ನ್ನು ಒತ್ತಿ.(ಓ.ಟಿ.ಪಿ ಕೋಡ್’ಗೆ 30 ನಿಮಿಷಗಳ ಕಾಲಾವಧಿ ಇರುತ್ತದೆ)
7.   ಆಧಾರ್ ಕಾರ್ಡ್ ಗೆ ನಿಮ್ಮ ಮೋಬೈಲ್ ನಂಬರ್ ಲಿಂಕ್ ಆದ  ಬಳಿಕ ನಿಮ್ಮ ಮೊಬೈಲ್ಗೆ ಈ ಪ್ರಕ್ರಿಯೆ ಯಶಸ್ವಿಯಾಗಿರುವ ಬಗ್ಗೆ ಸಂದೇಶ ಬರುತ್ತದೆ (48 ಗಂಟೆಯ ಒಳಗಾಗಿ ಸಂದೇಶ ಬರುತ್ತದೆ.)

ಇನ್ನು ಜಿಯೋ ಬಳಕೆದಾರರು ಸಿಮ್ ಕೊಳ್ಳುವಾಗಲೇ ಆಧಾರ್’ನ ಮೂಲಕ ಪಡೆದ ಕಾರಣ ಅವರು ಮತೊಮ್ಮೆ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೇ ಹೆಚ್ಚಿನ ಅವಶ್ಯಕತೆ ಬೇಕಾಗಿದ್ದಲ್ಲಿ ನೀವು ನಿಮ್ಮ ಹತ್ತಿರದ ಯಾವುದೇ ಗ್ರಾಹಕರ ಕೇಂದ್ರಕ್ಕೆ ಹೋಗಿ ಲಿಂಕ್ ಮಾಡಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ Kannadaviralnews@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.